Site icon Ullalavani

ಕರ್ನಾಟಕದಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ : ಸುರೇಂದ್ರನ್

UN NETWORKS

ಉಳ್ಳಾಲ: ಮಂಗಳೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವ ಮೂಲಕ ಚರಿತ್ರೆಯನ್ನೇ ನಿರ್ಮಿಸಬೇಕಿದೆ ಎಂದು ಕಾಸರಗೋಡು ಬಿಜೆಪಿ ಮುಖಂಡ ಸುರೇಂದ್ರನ್ ಹೇಳಿದ್ದಾರೆ.

ಅವರು ಮುಡಿಪು ಗರಡಿಪಳ್ಳದಿಂದ , ಮುಡಿಪು ಮುಡಿಪಿನ್ನಾರ್ ದೈವಸ್ಥಾನದವರೆಗೆ ಜರಗಿದ ಬೃಹತ್ ರೋಡ್ ಶೋ ಮತ್ತು ಮುಡಿಪು ಜಂಕ್ಷನ್ನಿನಲ್ಲಿ ಭಾನುವಾರ ಜರಗಿದ ಬಹಿರಂಗ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ದೇಶಾದ್ಯಂತ ಎರಡು ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಇದೆ. ಪ್ರಧಾನಿಯವರು ಹೇಳಿದಂತೆ ಕಾಂಗ್ರೆಸ್ಸಿನ ಸ್ಥಿತಿ ಪಿಪಿಪಿ ಆಗಲಿದ್ದು, ಪಂಜಾಬ್ , ಪಾಂಡಿಚ್ಚೇರಿ, ಮತ್ತೊಂದು ರಾಜ್ಯದಲ್ಲಿ ಪಾರ್ಟಿ ಮಾತ್ರ ಉಳಿದಿದೆ.ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿರಮಾನಾಥ ರೈ ಅಲ್ಲ ಹಣಾನಾಥ ರೈ, ಇನ್ನೊಂದು ಖಾದರ್ ಅಲ್ಲ ಲೂಟಿ ಖಾದರ್ ಕಾಂಗ್ರೆಸ್ ಅಂದರೆ ಕರ್ನಾಟಕದ ಖಜಾನೆಯನ್ನೇ ಕೊಳ್ಳೆ ಹೊಡೆಯುವ ಪಾರ್ಟಿಯಾಗಿದೆ. ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಕೇರಳದಲ್ಲಿ ಸರೀತಾ ವೇಣುಗೋಪಾಲ ಅನ್ನುವ ಖ್ಯಾತಿ ಇದೆ.ಕರ್ನಾಟಕ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಅರೆಬ್ಬಿ ಕಡಲಲ್ಲಿ ಧೂಳೀಪಟವಾಗಲಿದೆ.

ಮೇ.14 ರ ಬೆಳಿಗ್ಗೆ ಸೂರ್ಯೋದಯಕ್ಕೆ ತಾವರೆ ಅರಳಬೇಕಿದೆ. ಕ್ಷೇತ್ರದಲ್ಲಿ ಮೃತ್ಯು ಭಾಗ್ಯವನ್ನೇ ನೀಡುತ್ತಿರುವ ಕಾಂಗ್ರೆಸ್ ನ ದುರಾಡಳಿತದಿಂದ ಬೇಸತ್ತು ಜನ ಬದಲಾವಣೆ ಬಯಸಿದ್ದಾರೆ‌. ಇದರ ಮುನ್ಸೂಚನೆಯಾಗಿ ಕ್ಷೇತ್ರದ ಅಭ್ಯರ್ಥಿ ಸಂತೋಷ್ ರೈ ಜತೆಗೆ ಎಲ್ಲಾ ಜಾತಿ ಮತ್ತು ಧರ್ಮಆವರಲ್ಲಿ ವ್ಯತ್ಯಾಸ ಇಲ್ಲದೆ ದುಡಿಯುತ್ತಿದ್ದಾರೆ ಎಂದರು.

ಜಿ.ಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ಕಾಂಗ್ರೆಸ್ಸಿನವರು ಉಳ್ಳಾಲದಲ್ಲಿ ಸಾಮರಸ್ಯದ ಯಾತ್ರೆ ಮಾಡಿ ಸಾಮರಸ್ಯವನ್ನೇ ಕದಡಿಸಿದರು. ಇನ್ಫೋಸಿಸ್ ನಲ್ಲಿ ಯುವಸಮುದಾಯಕ್ಕೆ ಉದ್ಯೋಗದ ಭರವಸೆ ನೀಡಿ ಉದ್ಯೋಗವನ್ನೇ ನೀಡಿಲ್ಲ.
ಕಡಲ್ಕೊರೆತ ದಿಂದ ಅಲ್ಲಿನ ಜನ ಸ್ಥಳ ಬಿಟ್ಟು ಓಡುವಂತಾಗಿದೆ. 207 ಕೋಟಿ ಜಗದೀಶ್ ಶೆಟ್ಟರ್ ನೀಡಿರುವುದೇ ಅನುದಾನ ಎಂದರು.

ಅಲ್ಪಸಂಖ್ಯಾತ ಮೋರ್ಛಾದ ಫಝಲ್ ಅಸೈಗೋಳಿ ಮಾತನಾಡಿ ಕ್ಷೇತ್ರದ ದೇವಸ್ಥಾನಗಳಲ್ಲಿ ತಾಂಬೂಲವನ್ನು ಪಡೆಯುವ ಶಾಸಕರು ಅದನ್ನು ವೇಸ್ಟೇಜ್ ಗೆ ಹಾಕುತ್ತಾರೆ. ಇದು ಧರ್ಮಗುರು ಒಬ್ಬರಲ್ಲಿ ಅವರೇ ಬಾಯ್ಬಿಟ್ಟ ಸತ್ಯ. ಮುಸ್ಲಿಮರನ್ನು , ಹಿಂದುಗಳನ್ನು ಮಂಗ ಮಾಡುವುದೇ ಖಾದರ್ ಜಾಯಮಾನ. ಖಾದರ್ ಮತ್ತವರ ಆಪ್ತ ಸಹಾಯಕ ರ ಕಾರ್ಯ ಬಾಪ್ ಏಕ್ ನಂ, ಬೇಟಾ ದೋ ನಂಬರ್ ಅನ್ನುವ ದೋಖಾಬಾಜಿಯಲ್ಲಿ ಮುಂದುವರೀತಿದೆ ಎಂದರು.

ಅಭ್ಯರ್ಥಿ ಸಂತೋಷ್ ರೈ ಮಾತನಾಡಿ ಬಿಜೆಪಿ ಆಡಳಿತವಿರುವ ಕುರ್ನಾಡು, ಮುನ್ನೂರು, ಸೋಮೇಶ್ವರ, ತಲಪಾಡಿ ಪಂಚಾಯಿತಿನಲ್ಲಿ ಹಕ್ಕುಪತ್ರ ನೀಡದೇ ದ್ವೇಷ ರಾಜಕಾರಣ ನಡೆಸುವ ಶಾಸಕರನ್ನು ಜನ ವಿರೋಧಿ ಸಬೇಕಿದೆ. ಈವರೆಗೆ ಕೋಮುಗಲಭೆ ಆಗದ ಕ್ಷೇತ್ರ ಅದು ಕುರ್ನಾಡು ಕ್ಷೇತ್ರ. ಅಲ್ಪಸಂಖ್ಯಾತರ ದಂಡೇ ಸಾಮರಸ್ಯ ಕಂಡು ಬಿಜೆಪಿಗೆ ಬರುತ್ತಿದ್ದಾರೆ. ಕಪ್ಪು ಪಲ್ಸಾರ್ ಮೂಲಕ ಚೂರಿ ಹಾಕಿ ಯುವಕರ ಕಿಡ್ನಿ ಕಳೆಯುವಂತಹ ವಾತಾವರಣ ಉಳ್ಳಾಲದಲ್ಲಿ ಆಗಿದೆ. ಜನಬಲ ಹಾಗೂ ಧನಬಲದ ಸ್ಪರ್ಧೆಯಾಗಿದೆ ಎಂದರು.

ಈ ಸಂದರ್ಭ ಜಿ.ಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಕ್ಷೇತ್ರ ಕಾರ್ಯದರ್ಶಿ ಮೋಹನ್ ರಾಜ್, ಮಂಗಳೂರು ಮಂಡಲ ಉಪಾಧ್ಯಕ್ಷ ಯಶವಂತ ದೇರಾಜೆ, ಅನಿಲ್ ದಾಸ್, ಅಲ್ಪಸಂಖ್ಯಾತ ಮೋರ್ಛಾದ ಡಾ. ಮುನೀರ್ ಬಾವಾ, ಫಝಲ್ ಅಸೈಗೋಳಿ, ಕುರ್ನಾಡು ಗ್ರಾ.ಪಂ ಅಧ್ಯಕ್ಷೆ ಶೈಲಜಾ ಮಿತ್ತಕೋಡಿ, ಕೈರಂಗಳ ಗ್ರಾಮದ ಮುನೀರ್ ಮಾಸ್ಟರ್, ಬಾಳೆಪುಣಿ ಗ್ರಾ.ಪಂ ಸದಸ್ಯ ಸಿದ್ದೀಖ್, ಕುರ್ನಾಡು ಗ್ರಾ.ಪಂ ಉಪಾಧ್ಯಕ್ಷ ನಿತಿನ್ ಗಟ್ಟಿ, ಪ್ರಕಾಶ್ ಸಿಂಫೋನಿ, ಕೇಶವ ಭಟ್, ಸೀತಾರಾಮ ಶೆಟ್ಟಿ, ರಿಯಾಝ್ ಬೋಳಿಯಾರ್ ಸಚಿನ್ ಶೆಟ್ಟಿ, ಉಪಸ್ಥಿತರಿದ್ದರು.

ಟಿ.ಜಿ. ರಾಜಾರಾಂ ಭಟ್ ಸ್ವಾಗತಿಸಿದರು.ರಾಜೇಶ್ ಶೆಟ್ಟಿ ಪಜೀರುಗುತ್ತು ಕಾರ್ಯಕ್ರಮ ನಿರೂಪಿಸಿದರು.

Exit mobile version