Site icon Ullalavani

ದೇರಳಕಟ್ಟೆ ಕಾಂಗ್ರೆಸ್ ಮತಯಾಚನೆಯಲ್ಲಿ ಭಾಗವಹಿಸಿದ ಕೇರಳ ಮಾಜಿ ಸಂಸದ ಕುಟ್ಟಿ

UN NETWORKS

ಉಳ್ಳಾಲ: ಕಾಂಗ್ರೆಸ್ ಜಯಶಾಲಿಯಾದರೆ ಭಾರತ ವಿಜಯಿಯಾದಂತೆ , ರಾಜ್ಯದಲ್ಲಿ ಸಾಮರಸ್ಯ, ಪ್ರಜಾಪ್ರಭುತ್ವದ ಅಳಿವು ಉಳಿವಿನ ಪ್ರಶ್ನೆ ಕರ್ನಾಟಕ ಚುನಾವಣೆಯಾಗಿದೆ ಎಂದು ಕಣ್ಣೂರು ಮಾಜಿ ಸಂಸದ ಅಬ್ದುಲ್ಲಾ ಕುಟ್ಟಿ ಹೇಳಿದ್ದಾರೆ.

ಅವರು ಕಾಂಗ್ರೆಸ್ ಅಭ್ಯರ್ಥಿ ಪರ ಬೆಳ್ಮ ಪಂ. ವ್ಯಾಪ್ತಿಯ ದೇರಳಕಟ್ಟೆ ಭಾಗದಲ್ಲಿ ಮತಯಾಚನೆ ನಡೆಸಿ ಮಾತನಾಡಿದರು.
ರಾಹುಲ್ ಗಾಂಧಿಯನ್ನು ಕರೆಯೋಣ ರಾಷ್ಟ್ರವನ್ನು ರಕ್ಷಿಸೋಣ ಅನ್ನುವ ಮಾತಿನೊಂದಿಗೆ ಮುಂಬರುವ ಚುನಾವಣೆಯನ್ನು ಎಲ್ಲರೂ ಎದುರಿಸಬೇಕಾಗಿದೆ.

ಈ ನಿಟ್ಟಿನಲ್ಲಿ ಎಲ್ಲರೂ ಕಾಂಗ್ರೆಸ್ ಅನ್ನು ಬೆಂಬಲಿಸುವ ಮೂಲಕ ಕ್ಷೇತ್ರದ ಅಭ್ಯರ್ಥಿ ಯು.ಟಿ.ಖಾದರ್ ಅವರನ್ನು ಬೆಂಬಲಿಸಬೇಕಿದೆ. ಆರೋಗ್ಯ ಸಚಿವರಾಗಿದ್ದ ಅವಧಿಯಲ್ಲಿ ಉಳ್ಳಾಲ ಭಾಗದಲ್ಲಿ ಬಹಳ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು, ಕೋಟ್ಯಂತರ ಅನುದಾನದ ಆಸ್ಪತ್ರೆಯ ನಿರ್ಮಾಣವೂ ಕ್ಷೇತ್ರದಲ್ಲಿ ಆಗಿದೆ ಎಂದರು.

ಈ ವೇಳೆ ಝುಲ್ಫೀಕಾರ್ ಆಲಿ, ಕಾಸರಗೋಡು ಜಿ.ಪಂ ಸದಸ್ಯ ಹರ್ಷಾದ್ ವರ್ಕಾಡಿ, ಬೆಳ್ಮ ಗ್ರಾ.ಪಂ ಉಪಾಧ್ಯಕ್ಷ ಅಬ್ದುಲ್ ಸತ್ತಾರ್ ಸಿ.ಎಂ ರವೂಫ್, ಟಿ.ಎಸ್.ನಾಸೀರ್, ಬೆಳ್ಮ ಗ್ರಾ.ಪಂ ಸದಸ್ಯ ಯೂಸುಫ್ ಬಾವಾ , ಮುಖಂಡ ರವಿರಾಜ್ ಶೆಟ್ಟಿ, ಇರಾ ಗ್ರಾ.ಪಂ ಅಧ್ಯಕ್ಷ ರಝಾಕ್ ಕುಕ್ಕಾಜೆ ಮುಂತಾದವರು ಉಪಸ್ಥಿತರಿದ್ದರು.

Exit mobile version