Site icon Ullalavani

ಸಜಿಪನಡು: ಮದ್ರಸ ಅಧ್ಯಾಪಕರಿಂದ ಸ್ವಚ್ಛತಾ ಕಾರ್ಯಕ್ರಮ

UN NETWORKS

ಸಜಿಪನಡು: ಸಮಸ್ತ ಜಂ-ಇಯ್ಯತುಲ್ ಮುಅಲ್ಲಿಮೀನ್ ಸಜಿಪ ರೇಂಜ್, ಸಮಸ್ತ ಮದ್ರಸ ಮ್ಯಾನೇಜ್‍ಮೆಂಟ್ ಸಜಿಪ ರೇಂಜ್ ಇವರ ವತಿಯಿಂದ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‍ನ ಸಹಯೋಗದಲ್ಲಿ ಸ್ವಚ್ಛತಾ ಕಾರ್ಯಕ್ರಮವು ಸಜಿಪನಡು ಪರಿಸರದಲ್ಲಿ ನಡೆಯಿತು.

ಸಜಿಪ ರೇಂಜ್‍ಗೊಳಪಟ್ಟ ವಿವಿಧ ಮದ್ರಸಗಳ ಅಧ್ಯಾಪಕರು ಮತ್ತು ಟ್ಯಾಲೆಂಟ್ ಕಾರ್ಯಕರ್ತರು ಸಜಿಪನಡು ಪರಿಸರದ ರಸ್ತೆಬದಿಯಲ್ಲಿದ್ದ ಕಸಕಡ್ಡಿಗಳನ್ನು ಹೆಕ್ಕಿ ಹಾಗೂ 2 ಬಸ್ ನಿಲ್ದಾಣಗಳನ್ನು ಗುಡಿಸಿ ತೊಳೆದು ಶುಚಿಗೊಳಿಸಿದರು. ಮದ್ರಸ ಅಧ್ಯಾಪಕರ ಈ ಮಾದರಿ ಕಾರ್ಯಕ್ರಮಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದರು.

ಪರಿಸರ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಜಿಪ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್‍ನ ಅಧ್ಯಕ್ಷ ಅಬ್ದುಲ್ ರಹ್‍ಮಾನ್ ಫೈಝಿ ಬೋಳಿಯಾರ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಫೈಝಿ ಕೋಲ್ಪೆ, ಜೊತೆ ಕಾರ್ಯದರ್ಶಿ ಇಲ್ಯಾಸ್ ಅರ್ಶದಿ ಬೈಲಗುತ್ತು, ಪರೀಕ್ಷಾ ಬೋರ್ಡು ಚಯರ್‍ಮೆನ್ ಪಿ.ಎ.ಎಂ ಶರೀಫ್ ಮೌಲವಿ, ಸಜಿಪ ಖತೀಬ್ ಅಬ್ದುಲ್ಲಾ ಬಾಖವಿ, ಖಾಸಿಂ ದಾರಿಮಿ ಆಲಂಪಾಡಿ, ಮುನೀರ್ ಮೌಲವಿ ಕಜೆ, ಇಬ್ರಾಹಿಂ ಮುಸ್ಲಿಯಾರ್ ಆಲಂಪಾಡಿ, ಹಸೈನಾರ್ ಮುಸ್ಲಿಯಾರ್ ಸಜಿಪ, ಸಿದ್ದೀಖ್ ದಾರಿಮಿ ಅಸೈಗೋಳಿ, ಅಬ್ದುಸ್ಸಲಾಂ ಜಿಸ್ತಿ, ಝುಬೈರ್ ಅಝ್‍ಹರಿ ಕಾರಾಜೆ, ಅಬ್ದುಲ್ ಖಾದರ್ ಮುಸ್ಲಿಯಾರ್ ಸಜಿಪ, ಅಶ್ರಫ್ ಝುಹ್‍ರಿ, ಮುಹಮ್ಮದ್ ಮುಸ್ಲಿಯಾರ್ ಜಾರಿಗೆಬೈಲು, ಸಜಿಪನಡು ಮಸೀದಿ ಉಪಾಧ್ಯಕ್ಷ ಆಸಿಫ್ ಕುನ್ನಿಲ್, ಎಸ್.ಕೆ.ಎಸ್.ಎಸ್.ಎಫ್ ಕ್ಯಾಂಪಸ್ ವಿಂಗ್ ಅಧ್ಯಕ್ಷ ಅಬ್ದುಲ್ ಖಾದರ್ ಸಜಿಪ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‍ನ ಅಧ್ಯಕ್ಷ ರಿಯಾಝ್ ಕಣ್ಣೂರು, ಪ್ರಧಾನ ಕಾರ್ಯದರ್ಶೀ ಡಿ ಅಬ್ದುಲ್ ಹಮೀದ್ ಕಣ್ಣೂರು, ಸಲಹೆಗಾರ ರಫೀಕ್ ಮಾಸ್ಟರ್, ಸದಸ್ಯರಾದ ಜಸೀಮ್ ಸಜಿಪ, ಅಸ್ಫರ್ ಹುಸೈನ್, ನಕಾಶ್ ಬಾಂಬಿಲ ಮತ್ತು ಮಾಸ್ಟರ್ ಫಹದ್ ಭಾಗವಹಿಸಿದ್ದರು.

Exit mobile version