UN NETWORKS
ಕೋಟೆಕಾರು: ಸಮಾಜ ಸಂಘಟನೆಯಲ್ಲಿ ಯುವ ಸಮುದಾಯದ ಪಾತ್ರ ಮಹತ್ವದ್ದಾಗಿದ್ದು, ಸಾಮಾಜಿಕ ಕಾರ್ಯಗಳೊಂದಿಗೆ ಸಮಾಜದ ಅಭಿವೃದ್ಧಿಗೆ ಯುವಜನರು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಪುತ್ತೂರು ಇಲ್ಲಿನ ಪ್ರಾಧ್ಯಾಪಕ ಉದಯ ಕುಮಾರ್ ಎಸ್. ಅಭಿಪ್ರಾಯಪಟ್ಟರು.
ರಾಮರಾಜ ಕ್ಷತ್ರಿಯ ಸೇವಾ ಸಂಘ ಉಳ್ಳಾಲ ವಲಯ ಅಧ್ಯಕ್ಷ ಸೀತಾರಾಮ ಕೊಪ್ಪಲು ನೂತನ ಸಂಘಟನೆಯನ್ನು ಉದ್ಘಾಟಿಸಿ ಹಿರಿಯ ಮಾರ್ಗದರ್ಶನದಲ್ಲಿ ಯುವ ಜನರು ಸಮಾಜದ ಕಾರ್ಯದಲ್ಲಿ ಕೆಲ ಸಮಯವನ್ನು ಮೀಸಲಿಡುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು.
ಉದ್ಯಮಿ ಪಮ್ಮಿ ಯಾನೆ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲು, ಬಿ.ಕೆ. ಮೂರ್ತಿ ಪಾರೆಮನೆ, ಹಿರಿಯ ನ್ಯಾಯವಾದಿ ರಾಘವೇಂದ್ರ ರಾವ್ ,ಪ್ರಶೀಲ್ ಇನ್ಪ್ರಾಟೆಕ್‍ನ ಅನಿಲ್ ರಾವ್, ಮಿಸ್ಟ್ರಸ್ ಇಂಡಿಯಾ ವಲ್ಡ್ ಪ್ರಶಸ್ತಿ ವಿಜೇತೆ ತೃಪ್ತಿ ಅರವಿಂದ್, ರಾಮಕ್ಷತ್ರಿಯ ಮಹಿಳಾ ಸಂಘ, ಮಂಗಳೂರು ಇದರ ಅಧ್ಯಕ್ಷೆ ಕಲ್ಪನಾ ವೆಂಕಟೇಶ್, ಯುವ ಕ್ಷಾತ್ರದ ಅಧ್ಯಕ್ಷ ಅಮಿತ್ ರಾಜ್ ಬೇಕಲ್, ಉಪಾಧ್ಯಕ್ಷ ಜಿತೇಂದ್ರ ಮತ್ತು ರಶ್ಮೀ, ಕಾರ್ಯದರ್ಶಿ ಅರುಣಾ ಜೆಪ್ಪು, ಜತೆ ಕಾರ್ಯದರ್ಶಿಗಳಾದ ನಿತಿನ್ ಮತ್ತು ಭವ್ಯಾ, ಕ್ರೀಡಾ ಕಾರ್ಯದರ್ಶಿ ಗಗನ್ ದೀಪ್, ಸಂಘಟನಾ ಕಾರ್ಯದರ್ಶಿ ಭರತ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಮುದಾಯದ ಯುವ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಯೋಗೀಶ್ ಮಲ್ಲಿಗೆಮಾಡು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅರುಣಾ ಜೆಪ್ಪು ವಂದಿಸಿದರು.