Site icon Ullalavani

ಜೆದ್ದಾ : ಸೌದಿ ಅರೇಬಿಯದಿಂದ ತಾಯ್ನಾಡಿಗೆ ಹರಿದು ಬರುತ್ತಿರುವ ಕರಾವಳಿ ಬಾಗದ ಮತದಾರರು

UN NETWORKS

ಜೆದ್ದಾ: ಸೌದಿ ಅರೇಬಿಯದ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿ ಕಾಂಗ್ರೆಸ್ ನ ಪತಾಕೆ ಹಾರಿಸಿದ ಕೀರ್ತಿ ಸೌದಿ ಅರೇಬಿಯದ ವಾಣಿಜ್ಯ ನಗರ ಜಿದ್ದಾಕ್ಕೆ ಸಲ್ಲುತ್ತದೆ.

ಮಾತ್ರವಲ್ಲ ಸಾರ್ವತ್ರಿಕ ಚುನಾವಣೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿ ಇಷ್ಟೊಂದು ಪ್ರಮಾಣದಲ್ಲಿ ಮತದಾನ ಮಾಡಲು ತಾಯ್ನಾಡಿಗೆ ತೆರಳುತ್ತಿದ್ದು ಅದರಲ್ಲೂ ಮುಖ್ಯವಾಗಿ ಕರಾವಳಿ ಭಾಗದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಈಗಾಗಲೇ ಊರಿಗೆ ತಲುಪಿದ್ದು ಚುನವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.

ಜೆದ್ದಾದಿಂದ ಶಕೀಲ್ ದೇರಳಕಟ್ಟೆ ನೇತ್ರತ್ವದ ಮೊದಲ ತಂಡವು ಇಂದು ತಾಯ್ನಾಡಿಗೆ ತಲುಪಲಿದ್ದು ಇನ್ನೂ ಇಂತಹ ಅನೇಕ ತಂಡಗಳು ಸೌದಿ ಅರೇಬಿಯದಿಂದ ಅತೀ ಶೀಘ್ರದಲ್ಲಿ ಭಾರತಕ್ಕೆ ಬಂದಿಳಿಯಳಿದೆ.

Exit mobile version