UN NETWORKS
ಉಳ್ಳಾಲ: ಬಿಜೆಪಿ ದೇಶಕ್ಕೆ ಮಾರಕ. ಕರ್ನಾಟಕ ವಿಧಾನಸಭೆ ಫಲಿತಾಂಶ ಮುಂದಿನ ಲೋಕಸಭೆ ಚುನಾವಣೆಗೆ ಲಾಭ ತರಲಿದೆ. ಅದಕ್ಕಾಗಿ ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬರಲು ಎಂದಿಗೂ ಅವಕಾಶ ಮಾಡಿಕೊಡಬಾರದು ಎಂದು ಸಿಪಿಎಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ ಹೇಳಿದರು.
ದೇಶಾದ್ಯಂತ ಬಿಜೆಪಿ ಸರಕಾರದ ವಿರುದ್ದ ಜನ ಏಳಬೇಕಿದೆ. ಅತ್ಯಾಚಾರ, ಅನಾಚಾರಗಳಲ್ಲೇ ಬಿಜೆಪಿ ಸರಕಾರ ತೊಡಗಿಸಿಕೊಂಡಿದೆ.
ಬಿಜೆಪಿಯಂತೆಯೇ ರಾಜ್ಯದ ಕಾಂಗ್ರೆಸ್ ಪಕ್ಷಕ್ಕೆ ಸಾಮಾಜಿಕ ಬದ್ಧತೆ ಇಲ್ಲದಂತಾಗಿದೆ. ಸಿದ್ದ ರಾಮಯ್ಯ ನವರ ನೀತಿ ಬಿಜೆಪಿಗೆ ಹೊರತಾಗಿಲ್ಲ. ಕಾರ್ಪೊರೇಟ್ ಕಂಪೆನಿಗಳಿಗೆ ಸರಕಾರ ಸಹಕರಿಸುತ್ತಾ ಬಂದಿದೆ.
ನಿರುದ್ಯೋಗ ಸಮಸ್ಯೆ ಅಗಾಧ ಪ್ರಮಾಣದಲ್ಲಿದೆ, ಭೂಮಿಯ ಪ್ರಶ್ನೆ ಬಹುದೊಡ್ಡ ಸಮಸ್ಯೆಯಾಗಿತ್ತು. ಅದಕ್ಕಾಗಿ ಸಿಪಿಎಂ 4,500 ಕಿ.ಮೀ ಪಾದಯಾತ್ರೆ ನಡೆಸಿ ಹೋರಾಟದ ಫಲವಾಗಿ ಜನರಿಗೆ ಹಕ್ಕುಪತ್ರ ಸಿಕ್ಕಿದೆ. ಕನಿಷ್ಟ ಕೂಲಿ ವಿಚಾರದ ಲ್ಲಿಯೂ ಸಿಪಿಎಂ ಹೋರಾಟ ನಡೆಸಿತ್ತು. ಮಹಾದಾಯಿ ನೀರಿನ ವಿಚಾರ, ಪಡಿತರ ವಿಚಾರ ಸಮಸ್ಯೆ ಬಗೆಹರಿಸಲು ಅಸಾಧ್ಯವಾಗಿದೆ. ರಾಜ್ಯ ಸರಕಾರದಿಂದ ಆರ್ ಎಸ್ ಎಸ್ , ಬಜರಂಗದಳ ಮುಸ್ಲಿಂ ಮೂಲಭೂತವಾದಿಗಳ ರಕ್ಷಣೆಯಾಗಿದೆ.
ಕೋಮುವಾದಿ ನಾಯಕ ಕಲ್ಲಡ್ಕ ಭಟ್ ಅವರನ್ನು ಬಂಧಿಸಲು ಅಸಾಧ್ಯವಾದ ಕಾಂಗ್ರೆಸ್ ಸರಕಾರಕ್ಕೆ ಜಾತ್ಯಾತೀತೆಯ ಕರ್ನಾಟಕ ಉಳಿಸಲು ಸಾಧ್ಯವಾಗಿಲ್ಲ .ಕಾರ್ಮಿಕರು, ರೈತರು, ವಿದ್ಯಾರ್ಥಿಗಳು ಮಧ್ಯಮ ವರ್ಗದವರು ಸೇರಿ ನಡೆಸುತ್ತಿರುವ ಸಿಪಿಎಂ ಪಕ್ಷ ಈ ಬಾರಿ ಕ್ಷೇತ್ರದಲ್ಲಿ ಉತ್ತಮ ವ್ಯಕ್ತಿತ್ವ ಹೋರಾಟ ಮಾಡಿದ, ಉತ್ತಮ ವಾಗ್ಮಿಯಾದ ಅಭ್ಯರ್ಥಿಯನ್ನು ನೀಡಿದೆ. ಜನ ಅವರನ್ನು ಬೆಂಬಲಿಸಬೇಕಿದೆ ಎಂದರು.
ಹಕ್ಕುಪತ್ರ ವಿತರಣೆ ವೇಳೆ ಯು.ಟಿ.ಖಾದರ್ ಅವರ ಭಾವಚಿತ್ರ ಬಳಿಸಿದ್ದರು. ಅದು ಸರಕಾರದ ಆಸ್ತಿ , ಖಾದರ್ ಅವರ ಆಸ್ತಿಯಲ್ಲ ಎಂದರು.ಬೋಳಿಯಾರ್ ಮತ್ತು ಕಟೀಲ್ ಕಾರ್ತಿಕ್ ರಾಜ್ ಹತ್ಯೆಯನ್ನು ಮುಸ್ಲಿಮರ ಮೇಲೆ ಎತ್ತಿಕಟ್ಟಿದವರು. ಹತ್ತು ವರ್ಷಗಳಲ್ಲಿ ಫ್ಲೈಓವರ್ ಸಮಸ್ಯೆಯಿಂದ ಅನೇಕ ಹಿಂದು ಯುವಕರು ಸಾವನ್ನಪ್ಪಿದ್ದಾರೆ. ಅದು ಸಂಸದರಿಗೆ ಕಾಣುವುದಿಲ್ಲವೇ? ಎಂದು ಪ್ರಶ್ನಿಸಿದರು. ಧರ್ಮ ಅನ್ನುವುದು ವೈಯಕ್ತಿಕ ವಿಚಾರ. ಧರ್ಮವನ್ನು ರಾಜಕೀಯಕ್ಕೆ ತರುವುದು ಕೊಳಕು ಎಂದರು.
ಹಗಲು ಕಾಂಗ್ರೆಸ್ ರಾತ್ರಿ ಬಿಜೆಪಿ
ಅಭ್ಯರ್ಥಿ ನಿತಿನ್ ಕುತ್ತಾರ್ ಮಾತನಾಡಿಸಚಿವ ಖಾದರ್ ಅವರು ಹಗಲು ಕಾಂಗ್ರೆಸ್ ಆದರೆ ರಾತ್ರಿ ಬಿಜೆಪಿ ಆಗುತ್ತಿದ್ದಾರೆ. ಉಳ್ಳಾಲದ ಘಟಾನುಘಟಿ ಬಿಜೆಪಿ ಮುಖಂಡರು ತಮ್ಮ ವ್ಯಾಪಾರ ಕುದುರಿಸಲು ರಾತ್ರಿ ಹೊತ್ತು ಖಾದರ್ ಅವರ ಮನೆಯಲ್ಲಿ ಮತ್ತು ಕಚೇರಿಯಲ್ಲಿ ಕಾಣಿಸುತ್ತಿರುವುದು ವಿಪರ್ಯಾಸ ಎಂದರು.
ಈ ಸಂದರ್ಭ ಮುಖಂಡರುಗಳಾದ ಜೀವನರಾಜ್ ಕುತ್ತಾರ್, ಕೃಷ್ಣ ಪ್ಪ ಸಾಲ್ಯಾನ್, ಪದ್ಮಾವತಿ. ಯಸ್ ಶೆಟ್ಟಿ ಉಪಸ್ಥಿತರಿದ್ದರು.