Site icon Ullalavani

ಮೂಡಿಗೆರೆ ಕೃಷ್ಣಾಪುರದಲ್ಲಿ ಕಾರು ಲಾರಿ ಢಿಕ್ಕಿ, ನಾಟೆಕಲ್‍ನ ಇಬ್ಬರು ಮಹಿಳೆಯರು ಸಾವು, ಆರು ಮಂದಿಗೆ ಗಂಭೀರ ಗಾಯ

UN NETWORKS

ಉಳ್ಳಾಲ: ಮಂಗಳೂರಿನಿಂದ ಸಕಲೇಶಪುರಕ್ಕೆ ತೆರಳುತ್ತಿದ್ದ ಇನೋವಾ ಕಾರು ಮೂಡಿಗೆರೆ ತಾಲೂಕಿನ ಕೃಷ್ಣಾಪುರದ ರಾ.ಹೆ. ಯಲ್ಲಿ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ಆರು ಮಂದಿಯನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಮೃತರನ್ನು ಮಂಜನಾಡಿ ಗ್ರಾಮದ ನಾಟೆಕಲ್‍ನ ಅಸ್ಮಾ(50) ಹಾಗೂ ಸೌದಾ (48) ಎಂದು ಗುರುತಿಸಲಾಗಿದೆ. ನಾಟೆಕಲ್‍ನಿಂದ ಸಕಲೆಶಪುರಕ್ಕೆ ತಮ್ಮ ಕುಟುಂಬದೊಂದಿಗೆ ತೆರಳುತ್ತಿದ್ದಾಗ ಮೂಡಿಗೆರೆಯಿಂದ ಗೋಣಿಬೀಡು ಕಡೆಗೆ ಸಾಗುತ್ತಿದ್ದ ಲಾರಿ ಕೃಷ್ಣಾಪುರದ ಬಳಿ ಮುಖಾಮುಖಿ ಢಿಕ್ಕಿ ಹೊಡೆದಿದ್ದು ಅಪಘಾತದ ಪರಿಣಾಮ ಇಬ್ಬರು ಸ್ತಳದಲ್ಲೇ ಸಾವನ್ನಪ್ಪಿದರು.

ಗಂಭೀರ ಗಾಯಗೊಂಡಿರುವ ಇಸ್ಮಾಯಿಲ್(60), ತಮ್ಸಿಯಾ(40), ಅಯಾನ್(10), ತನೀಸ್(16), ಸೀದಾ(16) ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Exit mobile version