Site icon Ullalavani

ಸೋಮೇಶ್ವರ ಈಜಲು ತೆರಳಿದ ವ್ಯಕ್ತಿ ನೀರುಪಾಲು

UN NETWORKS

ಸೋಮೇಶ್ವರ : ಸೋಮೇಶ್ವರ ಕಡಲ ಕಿನಾರೆಗೆ ಸಂಬಂಧಿಕರ ಜೊತೆಗೆ ಬಂದ ಯುವಕನೋರ್ವ ನೀರಿನಲ್ಲಿ ಈಜಾಡುತ್ತಿದ್ದ ವೇಳೆ ಹಠಾತ್ತನೆ ಸಮುದ್ರದ ನೀರಿಗೆ ಕುಸಿದು ಬಿದ್ದಿದ್ದು ಸ್ಥಳೀಯರು ಸೇರಿ ಪ್ರಥಮ ಚಿಕಿತ್ಸೆ ನ್ಡೀ ಅಸ್ಪತ್ರೆಗೆ ಸಾಗಿಸುವ ಮದ್ಯೆ ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟ ಯುವಕನನ್ನು ರಾಕೇಶ್ ಆಚಾರ್(38) ಎಂದು ಗುರುತಿಸಲಾಗಿದೆ. ಮೈಸೂರಿನ ಜೆಪಿನಗರ ನಿವಾಸಿಯಾಗಿರುವ ರಾಕೇಶ್ ಶಕ್ತಿನಗರದಲ್ಲಿ ಎ. 28ರಂದು ನಡೆದ ತನ್ನ ತಂಗಿಯ ನೂತನ ಮನೆಯ ಗೃಹಪ್ರವೇಶದಲ್ಲಿ ಭಾಗವಹಿಸಿದ್ದರು. ಸೋಮವಾರ ತಂಗಿಯ ಕುಟುಂಬದೊಂದಿಗೆ ತೊಕ್ಕೊಟ್ಟುವಿನ ದೊಡ್ಡಮನ ಮಗಳ ಮನೆಯಲ್ಲಿ ಊಟ ಮುಗಿಸಿ ಸಂಜೆ ಕಡಲ ಕಿನಾರೆಗೆ ಬಂದಿದ್ದು, ಕುಟುಬದ ಸದಸ್ಯರ ಜೊತೆ ಸಮುದ್ರದ ಬದಿಯಲ್ಲಿ ನೀರಿನಲ್ಲಿ ಈಜಾಡುತ್ತಿದ್ದ ವೇಳೆ ರಾಕೇಶ್ ಹಠಾತ್ ಕುಸಿದು ಬಿದ್ದರು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಸ್ಥಳೀಯ ಈಜುಗಾರರು ಅವರನ್ನು ಸಮುದ್ರದಿಂದ ಮೇಲೆತ್ತಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ವೇಳೆ ಮೃತಪಟ್ಟರು ಎಂದು ತಿಳಿದು ಬಂದಿದೆ. ತುತುಋ ಸಂದರ್ಭದಲ್ಲಿ ಅಯಂಬುಲೆನ್ಸ್ ಗೆ ಕರೆ ಮಾಡಿದರೂ ಬರದೇ ಇದ್ದಾಗ ರಿಕ್ಷಾದಲ್ಲಿ ಸಾಗಿಸುವಾಗ ಮ~ತಪಟ್ಟಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version