Site icon Ullalavani

ನಿಟ್ಟೆ ವಿವಿಯಲ್ಲಿ ಕಾರ್ಯಾಗಾರ

UN NETWORKS

ಉಳ್ಳಾಲ: ಕಾರ್ಯಗಾರಗಳ ಮೂಲಕ ಜ್ಞಾನ ವೃದ್ಧಿಸುವುದರ ಜತೆಗೆ ಪರಸ್ಪರ ಜ್ಞಾನ ಹಂಚಿಕೊಳ್ಳಲು ಸಾಧ್ಯ ಎಂದು ಬೆಂಗಳೂರು ನಿಮ್ಹಾನ್ಸ್ ನ ಸೈಕೋಫಾರ್ಮಕಾಲಜಿ ವಿಭಾಗ ಮುಖ್ಯಸ್ಥ ಡಾ| ಚಿತ್ತರಂಜನ್ ಅಂದ್ರಾಡೆ ಅಭಿಪ್ರಾಯಪಟ್ಟರು.

ನಿಟ್ಟೆ ಮನೋವೈದ್ಯಶಾಸ್ತ್ರ ವಿಭಾಗ ಹಮ್ಮಿಕೊಂಡ ಕ್ಷೇಮ ಆಸ್ಪತ್ರೆಯ ಸೆಮಿನಾರ್ ಹಾಲ್ ನಲ್ಲಿ ಸೋಮವಾರ ` ಖಿನ್ನತೆ-ಶಮನಕಾರಿ ಮಧ್ಯಸ್ಥಿಕೆಗಳಲ್ಲಿ ನಾವೀನ್ಯತೆಗಳು ಹಾಗೂ ಕೆಟಮೈನ್ ಬಳಕೆಯ ಸಿದ್ಧಾಂತ ಮತ್ತು ಅಭ್ಯಾಸ ಕುರಿತ ಒಂದು ದಿನದ ಕಾರ್ಯಗಾರವನು ಉದ್ಘಾಟಿಸಿ ಮಾತನಾಡಿದರು.

ಕಿಟಮೈನ್ ಅನಸ್ತೇಷಿಯಾ ವಿಭಾಗದಲ್ಲಿ ಹೆಚ್ಚು ಬಳಕೆ ಮಾಡಲಾಗುತ್ತಿದ್ದು, ಖಿನ್ನತೆಗೆ ಒಳಗಾದವರನ್ನು ನಿಯಂತ್ರಿಸಲು ಕಿಟಮೈನ್ ಬಳಕೆ ಮಾಡಲಾಗುತ್ತಿದೆ. ಆದರೆ ಕಿಟಮೈನ್ ಕುರಿತ ಅಪಪ್ರಚಾರಗಳು ಹೆಚ್ಚಿದ್ದು, ಈ ಕುರಿತು ವಿದ್ಯಾರ್ಥಿಗಳಲ್ಲಿ ಹಾಗೂ ವೈದ್ಯರಲ್ಲಿ ಹೆಚ್ಚಿನ ಜ್ಞಾನ ಅಗತ್ಯ ಇರಬೇಕಿದೆ ಎಂದರು.

ಕೆ.ಎಸ್.ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಡೀನ್ ಡಾ|ಪಿ.ಯಸ್. ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು.

ಸಹ ಡೀನ್ ಡಾ| ಜಯಪ್ರಕಾಶ್ ಶೆಟ್ಟಿ, ವೈದ್ಯಕೀಯ ಅಧೀಕ್ಷಕ ಡಾ| ಶಿವಕುಮಾರ್ ಹಿರೇಮಠ, ನಿಟ್ಟೆ ಮನೋವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಸತೀಶ್ ರಾವ್ ಉಪಸ್ಥಿತರಿದ್ದರು.

ಡಾ| ಶ್ರೀನಿವಾಸ್ ಸ್ವಾಗತಿಸಿದರು. ಡಾ| ಶಿಶಿರ್ ಕುಮಾರ್ ವಂದಿಸಿದರು.

Exit mobile version