UN NETWORKS
ಉಳ್ಳಾಲ: ತಂತ್ರಜ್ಞಾನ ಯುಗದ ವಿದ್ಯಾರ್ಥಿಗಳ ಬದಲಾವಣೆಗೆ ತಕ್ಕಂತೆ ಕಾಲೇಜಿನ ಉಪನ್ಯಾಸಕರು ಮತ್ತು ಹೆತ್ತವರು ತಮ್ಮ ಜ್ಞಾನ ಕೌಶಲ್ಯವನ್ನು ಬದಲಾಯಿಸಿಕೊಂಡರೆ ಮಾತ್ರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಸಾಧ್ಯ ಎಂದು ಜ್ಞಾನ ಆಯೋಗದ ಮಾಜಿ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅಭಿಪ್ರಾಯಿಸಿದ್ದಾರೆ.
ಇಂದಿನ ಕಾಲದ ಮಕ್ಕಳು ಹಿಂದಿನ ಕಾಲದ ವ್ಯವಸ್ಥೆಯಲ್ಲಿ ಇಲ್ಲ. ತಂತ್ರಜ್ಞಾನಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳ ಕೌಶಲ್ಯ, ಕಾರ್ಯವೈಖರಿಯಲ್ಲಿ ಬದಲಾಗಿದ್ದಾರೆ. ಅವರ ಬದಲಾವಣೆ ಮತ್ತು ಅವರಿಗೆ ಬೇಕಾದ ಜ್ಞಾನವನ್ನು ನೀಡುವ ಕಾರ್ಯಕ್ಕೆ ಉಪನ್ಯಾಸಕರು ತಮ್ಮನ್ನು ಸಜ್ಜುಗೊಳಿಸಬೇಕಾಗಿದೆ. ಈ ರೀತಿಯಲ್ಲಿ ಕಾರ್ಯವಾದಾಗ ಯುವ ಜನಾಂಗ ಹೊಸ ವಿಚಾರಗಳ ಬಗ್ಗೆ ಅಭಿರುಚಿಯೊಂದಿಗೆ ನಾಯಕತ್ವವನ್ನು ವಹಿಸಕೊಳ್ಳಲು ಸಾಧ್ಯವಾಗುತ್ತದೆ ಎಂದರು.
80 ದಶಕದ ಡಿಜಿಟಲ್ ಕ್ರಾಂತಿಗೆ ಅಡಿಪಾಯ : ಇಂದು ಡಿಜಿಟಲ್ ಇಂಡಿಯಾ ವಿಚಾರದಲ್ಲಿ ಚರ್ಚೆಯಾಗುತ್ತಿದೆ. ಆದರೆ ಈ ಡಿಜಿಟಲ್ ಕ್ರಾಂತಿ 80ರ ದಶಕದಲ್ಲೇ ರಾಜೀವ್ ಗಾಂಧಿ ಕಾಲದಲ್ಲಿ ಅಡಿಪಾಯ ಹಾಕಲಾಗಿತ್ತು. ಅಂದು ಹಾಕಿದ ಭದ್ರ ಬುನಾದಿ ಇಂದು ಡಿಜಿಟಲ್ ಕ್ರಾಂತಿಗೆ ಕಾರಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಯೇನೆಪೆÇಯ ವಿಶ್ವವಿದ್ಯಾನಿಲಯದ ಹಣಕಾಸು ನಿರ್ದೇಶಕ ಯೇನೆಪೊಯ ಫರ್ಹಾದ್ ಸ್ಯಾಮ್ ಪಿತ್ರೋಡಾ ಅವರನ್ನು ಗೌರವಿಸಿದರು.ಹಣಕಾಸು ಅಧಿಕಾರಿ ಮಹಮ್ಮದ್ ಬಾವ, ಕೊಡಿಯಾಲ್‍ಬೈಲ್‍ನ ಯೇನೆಪೊಯ ಆಸ್ಪತ್ರೆಯ ನಿರ್ದೇಶಕ ಡಾ| ಮಹಮ್ಮದ್ ತಾಹಿರ್, ಇಸ್ಲಾಮಿಕ್ ಎಜ್ಯುಕೇಶನ್ ಟ್ರಸ್ಟ್‍ನ ಟ್ರಸ್ಟಿ ಡಾ| ಅಖ್ತರ್ ಹುಸೈನ್, ಯೇನೆಪೊಯ ನರ್ಸಿಂಗ್ ಕಾಲೇಜಿನ ಡಾ| ಲೀನಾ, ಕೆಪಿಸಿಸಿ ಪ್ರ.ಕಾರ್ಯದರ್ಶಿ ಮಂಜುನಾಥ ಭಂಡಾರಿ, ಎಐಸಿಸಿ ಕಾರ್ಯದರ್ಶಿ ಮಧುಯಸ್ಕಿ ಉಪಸ್ಥಿತರಿದ್ದರು.