UN NETWORKS
ಉಳ್ಳಾಲ: ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾ ಶರೀಫ್ ಮತ್ತು ಕೇಂದ್ರ ಜುಮಾ ಮಸೀದಿ ಉಳ್ಳಾಲ ಇದರ ಅಂಗ ಸಂಸ್ಥೆ ಸಯ್ಯಿದ್ ಮದನಿ ಅರಬಿಕ್ ಎಜ್ಯುಕೇಶನಲ್ ಟ್ರಸ್ಟ್ ಇದರ ಅಧೀನದಲ್ಲಿರುವ ಮದ್ರಸಾ ಪಬ್ಲಿಕ್ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಒಂಬತ್ತು ವಿದ್ಯಾರ್ಥಿಗಳು ಸಾಧನೆಗೈದಿದ್ದು, ಮೇಲಂಗಡಿ ಮದರಸ ಪಾರಮ್ಯ ಮೆರೆದಿದೆ.
ಕೇರಳಕ್ಕೆ ಮೊರೆ ಹೋಗದೆ ಸ್ವಂತ ಪುಸ್ತಕ: ಅಬ್ದುಲ್ ರಶೀದ್
ಹಿಂದೆ ಮದರಸ ಪುಸ್ತಕಾಗಳನ್ನು ಕೇರಳದಿಂದ ತರಿಸಲಾಗುತ್ತಿತ್ತು, ಆದರೆ ಈ ವರ್ಷ ಸಯ್ಯದ್ ಮದನಿ ಹೆಸರಿನಲ್ಲೇ ದರ್ಗಾದಿಂದ ಸ್ವಂತ ಪುಸ್ತಕಗಳನ್ನು ತರಲಾಗಿದೆ. ದರ್ಗಾಕ್ಕೆ ಹರಕೆ ರೂಪದಲ್ಲಿ ಬರುವ ಅನುದಾನದಲ್ಲಿ ಶೇ.40ನ್ನು ಧಾರ್ಮಿಕ ಶಿಕ್ಷಣಕ್ಕೆ ಮೀಸಲಿಡಲಾಗಿದ್ದು, ಈ ವರ್ಷ ಎರಡೂವರೆ ಕೋಟಿ ಹಣ ಮೀಸಲಿಡಲಾಗಿದೆ. ಧಾರ್ಮಿಕ ಶಿಕ್ಷಣ ಪಡೆಯದವರು ಸಮಾಜದಲ್ಲಿ ದಾರಿ ತಪ್ಪುತ್ತಿದ್ದು ಇದರಿಂದಾಗಿ ಆಪತ್ತುಗಳು ಎದುರಾಗುತ್ತಿವೆ ಎಂದು ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದರ್ಗಾ ಉಪಾಧ್ಯಕ್ಷ ಬಾವಾ ಮುಹಮ್ಮದ್, ಅರಬಿಕ್ ಟ್ರಸ್ಟ್ ಉಪಾಧ್ಯಕ್ಷರು ಮುಹಮ್ಮದ್, ಪ್ರ.ಕಾರ್ಯದರ್ಶಿ ಅಮೀರ್, ಕಾರ್ಯದರ್ಶಿ ಆಸಿಫ್ ಅಬ್ದುಲ್ಲ, ಚಾರಿಟೇಬಲ್ ಟ್ರಸ್ಟಿ ಮುಹಮ್ಮದ್ ಕೆ.ಎನ್ ಅಳೇಕಲ ಉಪಸ್ಥಿತರಿದ್ದರು.
