Site icon Ullalavani

ಸಚಿವರ ಹಿಂಬಾಲಕರಿಗೆ ಸಿಗುವ ಸೌಲಭ್ಯ ಅರ್ಹ ಅಲ್ಪಸಂಖ್ಯಾತ ರಿಗೆ ಮರೀಚಿಕೆಯಾಗಿದೆ – ವಳವೂರು ಮಹಮ್ಮದ್

UN NETWORKS

ಮಂಗಳೂರು: ಸ್ವಾತಂತ್ರ್ಯ ಬಂದಾಗಿನಿಂದ ಕಾಂಗ್ರೇಸ್ ಪಕ್ಷ ಅಲ್ಪಸಂಖ್ಯಾತ ರನ್ನು ಮತ ಬ್ಯಾಂಕ್ ದೃಷ್ಟಿ ಯಲ್ಲಿ ನೋಡಿಕೊಂಡು ಬಂದಿದೆ. ಬಿ.ಜೆ.ಪಿ. ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರಿಗೆ ಕಷ್ಡ ಎಂಬ ಗುಮ್ಮವನ್ನು ತೋರಿಸಿ ಅಧಿಕಾರ ಅನುಭವಿಸುತ್ತಿದೆ. ಆದರೆ ಅತೀ ಹೆಚ್ಚು ಕೋಮು ಗಲಬೆ ನಡೆದಿರೋದು ಕಾಂಗ್ರೇಸ್ ಅಧಿಕಾರದಲ್ಲಿ ಯಡಿಯೂರಪ್ಪ ನೇತೃತ್ವದ ಬಿ.ಜೆ.ಪಿ. ಸರಕಾರದ ಐದು ವರುಷ ಮುಸ್ಲಿಮ್ ಸಮಾಜ ನೆಮ್ಮದಿಯಿಂದ ಉಪವಾಸ ವೃತ ಕೈ ಗೊಂಡಿದೆ.

ಸಾಮರಸ್ಯದಿಂದ ಹಬ್ಬ ಆಚರಿಸಿದೆ. ಎಂದು ಬಿ.ಜೆ.ಪಿ. ಅಲ್ಪಸಂಖ್ಯಾತ ಮೋರ್ಛಾದ ಜಿಲ್ಲಾ ಕಾರ್ಯದರ್ಶಿ ವಳವೂರು ಮಹಮ್ಮದ್ ಆರೋಪಿಸಿದರು. ಅವರು ಬಿ.ಜೆ.ಪಿ. ಅಲ್ಪಸಂಖ್ಯಾತ ಮೋರ್ಛಾದ ಮಂಗಳೂರು ಕ್ಷೇತ್ರದ ಸಭೆಯಲ್ಲಿ ಹೇಳಿದರು.

ಅಲ್ಪಸಂಖ್ಯಾತರ ರಕ್ಷಕ ಎನ್ನುವ ಕಾಂಗ್ರೇಸಿನ ಅಸಲಿ ಮುಖವನ್ನು ಅರಿಯಬೇಕು. ಸರಕಾರದ ಸವಲತ್ತು, ಸೌಲಭ್ಯಗಳು ಸಚಿವರ ಹಿಂಬಾಲಕರಿಗೆ ಸಿಗುತ್ತಿದೆ ಹೊರತು ಅರ್ಹ ಬಡ ಅಲ್ಪಸಂಖ್ಯಾತರಿಗೆ ದೊರೆಯುತ್ತಿಲ್ಲ. ಕಾಂಗ್ರೇಸಿನಿಂದ ಮುಸ್ಲಿಮರಿಗೆ, ತನ್ನ ಕಾರ್ಯಕರ್ತರಿಗೆ ಅನ್ಯಾಯ ವಾಗಿದ್ದರೂ ಎಂಜಲು ಕಾಸಿಗೋಸ್ಕರ SDPI ಒಳ ಉಪ್ಪಂದ ಮಾಡಿದೆ.

ಈ ಬಾರಿಯ ಚುನಾವಣೆಯಲ್ಲಿ ಇಂತಹ ಕುತಂತ್ರ ನಾಟಕ ಮಾಡುವ ಕಾಂಗ್ರೇಸಿಗೆ ಜನ ಸರಿಯಾದ ಪಾಠ ಕಳಿಸಲಿದ್ದಾರೆ. ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಕ್ಷೇತ್ರ ಚುನಾವಣೆ ಪ್ರಭಾರಿ ನಿತಿನ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ ರಾದ ಚಂದ್ರಹಾಸ್ ಉಳ್ಳಾಲ್, ಕಾರ್ಯದರ್ಶಿ ಸತೀಶ್ ಕುಂಪಲ, ರಾಜ್ಯ ಕಾರ್ಯಕಾರಿಣಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು, ಮಾಜಿ ಅಧ್ಯಕ್ಷರಾದ ಚಂದ್ರ ಶೇಖರ್ ಉಚ್ಚಿಲ್, ಜಿಲ್ಲಾ ಅಲ್ಪಸಂಖ್ಯಾತ ಮೋರ್ಛಾದ ಪ್ರ.ಕಾರ್ಯದರ್ಶಿ ಡಾ.ಮುನೀರ್ ಹಾಜಿ, ಕ್ಷೇತ್ರ ಅಲ್ಪಸಂಖ್ಯಾತ ಮೋರ್ಛಾದ ಅಧ್ಯಕ್ಷರಾದ ಅಶ್ರಫ್ ಹರೇಕಳ, ಪ್ರ.ಕಾ. ಮುನೀರ್ ಮಾಸ್ಟರ್, ಕ್ಷೇತ್ರ ಉಪಾಧ್ಯಕ್ಷ ರಾದ ಯಶವಂತ ಅಮೀನ್, ಮುಂತಾದವರು ಉಪಸ್ಥಿತರಿದ್ದರು.

Exit mobile version