Site icon Ullalavani

ದಾವೂದ್ ಹಾಜಿ ಉಜಿರೆ ನಿಧನಕ್ಕೆ ಸಂತಾಪ

UN NETWORKS

ಉಳ್ಳಾಲ: ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸಮುದಾಯ ಸ್ನೇಹಿ ದಾವೂದ್ ಹಾಜಿ ಹೃದಯ ಸಂಬಂಧಿ ರೋಗದಿಂದ ಕೆಲವು ದಿನಗಳ ಕಾಲ ಮಂಗಳೂರಿನ ಆಸ್ಪತ್ರೆಯಲ್ಲಿದ್ದು ಗುರುವಾರ ನಿಧನರಾದರು.

ಹಲವಾರು ವರ್ಷಗಳಿಂದ ಅಬುಧಾಬಿಯಲ್ಲಿ ಉದ್ಯೋಗದಲ್ಲಿದ್ದ ಹಾಜಿಯವರು ವಿದೇಶದಲ್ಲಿ ಹಲವಾರು ದೀನೀ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು.

ಅವರ ಅಕಾಲಿಕ ಮರಣ ಸಮುದಾಯಕ್ಕೆ ತುಂಬಲಾರದ ನಷ್ಟ. SKSSF ಅಬುಧಾಬಿ ಸಮಿತಿಯ ಪ್ರಥಮ ಕಾಲದ ಪ್ರವರ್ತಕರಾದ ಹಾಜಿಯವರು ಸಂಘಟನೆ ಕಟ್ಟಿ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ.

ಅವರ ಮರಣಕ್ಕೆSKSSF ಅಬುಧಾಬಿ ಸಮಿತಿ ಸಂತಾಪ ವ್ಯಕ್ತ ಪಡಿಸುತ್ತದೆ. ಅಲ್ಲಾಹನು ಮಗ್ಫಿರತ್ ನೀಡಲಿ. ಎಲ್ಲರೂ ಪ್ರತ್ಯೇಕ ದುಆಃ ಮಾಡಲು ವಿನಂತಿ.

Exit mobile version