Site icon Ullalavani

ಪಂದ್ಯಾಟ ಆಯೋಜನೆಯಿಂದ ಸಂಘಟನೆ ಬಲಯುತವಾಗುತ್ತದೆ : ದೇವಪ್ಪ ಪೂಜಾರಿ

UN NETWORKS

ಅಂಬ್ಲಮೊಗರು: ದೈಹಿಕ ಸಾಮಥ್ರ್ಯ ವೃದ್ಧಿಗೆ ಕ್ರೀಡಾಕೂಟಗಳು ಸಹಕಾರಿಯಾಗಿದ್ದು, ವಾಲಿಬಾಲ್‍ನಂತಹ ಪಂದ್ಯಾಟ ಆಯೋಜನೆಯಿಂದ ಸಂಘಟನೆಗಳು ಬಲಯುತವಾಗಲು ಸಾಧ್ಯ ಎಂದು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಅಂಬ್ಲಮೊಗರು ಇದರ ಗೌರವಾಧ್ಯಕ್ಷ ದೇವಪ್ಪ ಪೂಜಾರಿ ಅಭಿಪ್ರಾಯಪಟ್ಟರು.

ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಅಂಬ್ಲಮೊಗರು ಇದರ ವತಿಯಿಂದ ಅಂಬ್ಲಮೊಗರುವಿನಲ್ಲಿ ನಡೆದ ಮುಕ್ತ ವಾಲಿಬಾಲ್ ಪಂದ್ಯಾಟ` ಅಂಬ್ಲಮೊಗರು ಟ್ರೋಫಿಗೆ ಚಾಲನೆ ನೀಡಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಅಂಬ್ಲಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮ್ಮದ್ ರಫೀಕ್, ಉದ್ಯಮಿ ರವಿರಾಜ್ ರೈ ಎಲ್ಯಾರ್, ಅಂಬ್ಲಮೊಗರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವಿಠಲ್ ರೈ ಬಸ್ತಿಕಟ್ಟೆ, ಭರತ್ ಫ್ರೆಂಡ್ಸ್ ಅಂಬ್ಲಮೊಗರು ನ ಅಧ್ಯಕ್ಷ ನವೀನ್ ಪೂಜಾರಿ ಪಡುಮನೆ, ಅಂಬ್ಲಮೊಗರು ಜನಪ್ರಿಯ ಯುವಕ ಮಂಡಲ ಅಧ್ಯಕ್ಷ ರಾಜೇಶ್ ಪೂಜಾರಿ ಕೆರೆಬಳಿ, ತೊಕ್ಕೊಟ್ಟು ಭಗತ್‍ಸಿಂಗ್ ಸೇವಾ ಪ್ರತಿಷ್ಠಾನ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು ಉಪಸ್ಥಿತರಿದ್ದರು.

Exit mobile version