UN NETWORKS
ಉಳ್ಳಾಲ: ಆರ್ಥಿಕ ಮಗ್ಗಟ್ಟಿನಿಂದ ಯುವಕನೊಬ್ಬ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯಗೈದ ಘಟನೆ ನಡೆದಿದ್ದು, ಗುರುವಾರ ಮೃತದೇಹ ನೇತ್ರಾವತಿ ರೈಲ್ವೇ ಸೇತುವೆ ಬಳಿ ಪತ್ತೆಯಾಗಿದೆ.
ಮನೆಯವರು ಹೊರಗಡೆ ಹೋಗಿರುವುದರಿಂದ ಮದುವೆಗೆ ಬಂದಿರಲಿಲ್ಲ. ರಂಜಿತ್‍ನನ್ನು ಸಂಪರ್ಕಿಸಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಗುರುವಾರ ಮೃತದೇಹ ನೇತ್ರಾವತಿ ನದಿಯ ರೈಲ್ವೇ ಸೇತುವೆ ಬಳಿ ನದಿಯ ತಟದಲ್ಲಿರುವುದನ್ನು ಕಂಡು ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆರ್ಥಿಕವಾಗಿ ಮುಗ್ಗಟ್ಟು ರಂಜಿತ್ ಆತ್ಮಹತ್ಯೆಗೆ ಕಾರಣ ಎಂದು ತಿಳಿದು ಬಂದಿದೆ. ಅವಿವಾಹಿತರಾಗಿದ್ದ ರಂಜಿತ್ ತಂದೆ, ತಾಯಿ, ಇಬ್ಬರು ಸಹೋದರರನ್ನು ಆಗಲಿದ್ದಾರೆ.