ಉಳ್ಳಾಲ: ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಜೆಡಿಎಸ್ ಮಾಜಿ ಮೇಯರ್ ಅಶ್ರಫ್ ಕೆ. ನಾಮಪತ್ರದ ಪೂರ್ವಭಾವಿಯಾಗಿ ಉಳ್ಳಾಲದ ಮಾಸ್ತಿಕಟ್ಟೆಯ ಚುನಾವಣಾ ಕಚೇರಿಯಿಂದ ಅಬ್ಬಕ್ಕ ಸರ್ಕಲ್‍ವರೆಗೆ ಪಾದಯಾತ್ರೆ ನಡೆಸಿ ಅಬ್ಬಕ್ಕ ಪ್ರತಿಮೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಬ್ಬಕ್ಕ ಸರ್ಕಲ್‍ನಿಂದ ಕಾರ್ಯಕರ್ತರೊಂದಿಗೆ ಪಾದಯಾತ್ರೆ ಮುಂದುವರಿಸಿದ ಅವರು ಬಳಿಕ ಮಂಗಳೂರಿನಲ್ಲಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಜೆಡಿಎಸ್ ಮಂಗಳೂರು ಕ್ಷೇತ್ರಾಧ್ಯಕ್ಷ ಮೋಹನ್‍ದಾಸ್ ಶೆಟ್ಟಿ ಉಳಿದೊಟ್ಟು , ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಝೀಜ್ ಮಲಾರ್,ಜಿಲ್ಲಾ ಉಪಾಧ್ಯಕ್ಷ ಸುಕುಮಾರ್ ರಾವ್, ಮುಖಂಡರಾದ ನಝೀರ್ ಉಳ್ಳಾಲ್, ಸಿದ್ಧಿಖ್ ತಲಪಾಡಿ, ಇಝಾಝ್ ಮಾರಿಪಳ್ಳ, ನಾಸಿರ್ ಮಂಗಳೂರು, ಪುತ್ತುಮೋನು ಉಳ್ಳಾಲ್, ಎಚ್. ಸಾಲಿ ಹರೇಕಳ, ಸತ್ತಾರ್ ಸಜಿಪ ರಾಷ್ಟ್ರೀಯ ಉಪಾಧ್ಯಕ್ಷೆ ಶ್ರೀಮಣಿ ವಿದ್ಯಾರ್ಥಿ ನಾಯಕ ಸಿನಾನ್, ಫಯಾಝ್ ಮಂಗಳೂರು, ಝಾಕಿರ್ ಉಳ್ಳಾಲ್, ಕಬೀರ್ ಉಳ್ಳಾಲ್, ಬಿ.ಎಚ್.ಕರೀಂ, ಭರತ್‍ರಾಜ್ ಶೆಟ್ಟಿ ಪಜೀರು ಹಸನ್ ಸಂಬಾರ್‍ತೋಟ ಮತ್ತಿತರರು ಉಪಸ್ಥಿತರಿದ್ದರು.