Site icon Ullalavani

ಕ್ಯಾನ್ಸರ್ ಜಾಗೃತಿ ಅಭಿಯಾನದಲ್ಲಿ ಟಾಟ ಟ್ರಸ್ಟ್-ಯೆನೆಪೋಯ ಒಡಂಬಡಿಕೆ

UN NETWORKS

ಉಳ್ಳಾಲ: ಕ್ಯಾನ್ಸರ್ ಜಾಗೃತಿ ಕಾರ್ಯದಲ್ಲಿ ಟಾಟಾ ಸಂಸ್ಥೆ ದಶಕಗಳಿಂದ ಕೈಜೋಡಿಸಿದ್ದು, ದೇಶಾದ್ಯಂತ ಕ್ಯಾನ್ಸರ್ ಪತ್ತೆಹಚ್ಚುವಿಕೆ ಹಾಗೂ ವೈದ್ಯಕೀಯ ಕೇಂದ್ರವನ್ನು ಸ್ಥಾಪಿಸಿದೆ. ಗ್ರಾಮೀಣ ಭಾಗದವರಿಗೆ ಟ್ರಸ್ಟಿನ ಸೇವೆ ಒದಗಿಸುವ ಸಲುವಾಗಿ ಖಾಸಗಿ ಟ್ರಸ್ಟ್ ಗಳು ಹಾಗೂ ವೈದ್ಯಕೀಯ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳೊಂದಿಗೆ ಒಡಂಬಡಿಕೆಗಳನ್ನು ನಡೆಸಲಾಗುತ್ತಿದೆ ಎಂದು ಟಾಟ ಟ್ರಸ್ಟ್‍ಗಳ ಟ್ರಸ್ಟೀ ಆರ್.ವೆಂಕಟರಮಣನ್ ಹೇಳಿದರು.

ಅವರು ದೇರಳಕಟ್ಟೆ ಯೆನೆಪೋಯ ಸ್ವಾಯುತ್ತೆಗೊಳ್ಳಲಿರುವ ವಿಶ್ವವಿದ್ಯಾನಿಲಯದಲ್ಲಿ ಮಂಗಳವಾರ ಆಡಿಟೋರಿಯಂನಲ್ಲಿ ಜರಗಿದ ಆರೋಗ್ಯ ಜಾಗೃತಿ ಪ್ರಚಾರ, ಕ್ಯಾನ್ಸರ್ ಆರಂಭಿಕ ಪತ್ತೆಹಚ್ಚುವಿಕ , ತಡೆಗಟ್ಟುವಿಕೆ ಹಾಗೂ ನಿಯಂತ್ರಣದ ಕುರಿತಾದ ರಾಷ್ಟ್ರೀಯ ವಿಚಾರಸಂಕಿರಣ ಮತ್ತು ಯೆನೆಪೋಯ ವಿವಿಯ ರಾಷ್ಟ್ರೀಯ ಸೇವಾ ಯೋಜನೆ ದೇಶಾದ್ಯಂತ ಆರಂಭಿಸಿರುವ ಕ್ಯಾನ್ಸರ್ ಜಾಗೃತಿ ಅಭಿಯಾನದ ಜತೆಗೆ ಟಾಟಾ ಟ್ರಸ್ಟ್ ಕೈಜೋಡಿಸುವ ಒಡಂಬಡಿಕೆಗೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಜನರಲ್ಲಿ ಕ್ಯಾನ್ಸರ್ ಕುರಿತ ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯಕ್ರಮಗಳ ಅಗತ್ಯವಿದೆ. ಪರಿಣಾಮಕಾರಿಯಾಗಿ ಟ್ರಸ್ಟ್ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರೂ ದೃಶದ ಮೂಲೆಗಳನ್ನು ತಲುಪಲು ಸಾಮಾಜಿಕ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಯೆನೆಪೋಯ ಸಂಸ್ಥೆಯಂತಹವರ ಬೆಂಬಲ ಅಗತ್ಯ ಬೇಕಿದೆ. ಕ್ಯಾನ್ಸರ್ ಆರಂಭದಲ್ಲಿಯೇ ಪತ್ತೆಹಚ್ಚುವಿಕೆಯಿಂದ ಹಲವು ಜೀವಗಳನ್ನು ಉಳಿಸಬಹುದು. ಈ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕಿದೆ ಎಂದರು.

ಬೆಂಗಳೂರು ಮಹಾನಗರಪಾಲಿಕೆ ಆಡಳಿತದ ನಿರ್ದೇಶಕ ಡಾ.ವಿಶಾಲ್ ಆರ್ ಮಾತನಾಡಿ ಯೆನೆಪೋಯ ಸಂಸ್ಥೆ ಹೊಂದಿರುವ ಸುಸಜ್ಜಿತ ಪ್ರಯೋಗಾಲಯ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯ ಸರಕಾರವೂ ಇಂತಹ ಕಾರ್ಯದಲ್ಲಿ ಸಂಸ್ಥೆ ಜತೆಗೆ ಕೈಜೋಡಿಸುವ ಕುರಿತು ಚಿಂತಿಸುವುದಾಗಿ ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಕೆ.ಭೈರಪ್ಪ ಮಾತನಾಡಿ ಕ್ಯಾನ್ಸರ್ ರೋಗಕ್ಕೆ ತುತ್ತಾದವರ ಸಾವಿನ ಪ್ರಮಾಣ ಹಿಂದೆ ವರ್ಷಕ್ಕೆ 0.7 ಮಿಲಿಯ ಇತ್ತು. ಸದ್ಯ ತಾಂತ್ರಿಕತೆ ಹಾಗೂ ಚಿಕಿತ್ಸಾ ವಿಧಾನಗಳಿಂದಾಗಿ ಒಂದು ಲಕ್ಷದಷ್ಟು ಮಂದಿ ಸಾವನ್ನಪ್ಪುತ್ತಿದ್ದು, ಪ್ರಮಾಣ ಇಳಿಕೆಯಾಗಿದೆ. ಜಾಗೃತಿಯ ಕೊರತೆಯಿಂದಾಗಿ ಜನ ರೋಗಕ್ಕೆ ತುತ್ತಾತುಗುತ್ತಿದ್ದಾರೆ. ದೇಶವ್ಯಾಪಿ ನ್ಯಾನೊ ಟೆಕ್ನಾಲಜಿ ಪರಿಣಾಮಕಾರಿಯಾಗಿ ಕಾರ್ಯಾಚರಿಸುತ್ತಿದೆ. ಇದರ ಜತೆಗೆ ಶಿಕ್ಷಣ ಸಂಸ್ಥೆ ಹಾಗೂ ಆಸ್ಪತ್ರೆಗಳಲ್ಲಿರುವ ಸಮುದಾಯ ಔಷಧೀಯ ವಿಭಾಗ ಗ್ರಾಮೀಣ ಭಾಗದ ಜನರನ್ನು ತಲುಪಿದಲ್ಲಿ ಕ್ಯಾನ್ಸರ್ ರೋಗಕ್ಕೆ ತುತ್ತಾಗುವವರ ಹಾಗೂ ಸಾವನ್ನಪ್ಪುವವರ ಸಂಖ್ಯೆಯನ್ನು ಇನ್ನಷ್ಟು ಕಡಿಮೆಗೊಳಿಸಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೆನೆಪೋಯ ಸ್ವಾಯುತ್ತೆಗೊಳ್ಳಲಿರುವ ವಿ.ವಿ ಕುಲಾಧಿಪತಿ ಯೆನೆಪೋಯ ಅಬ್ದುಲ್ಲಾ ಕುಂಞ ಮಾತನಾಡಿ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದಲ್ಲಿ ಯೆನೆಪೋಯ ಸಂಸ್ಥೆ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ಗ್ರಾಮೀಣ ಭಾಗದ ಜನರಿಗೆ ಪರಿಣಾಮಕಾರಿಯಾಗಿ ಜಾಗೃತಿಯನ್ನು ಮುಟ್ಟಿಸುವಂತಹ ಕಾರ್ಯಗಳು ಆಗುತ್ತಿವೆ ಎಂದರು.

ಬೆಂಗಳೂರು ರಾಷ್ಟ್ರೀಯ ಸೇವಾ ಯೋಜನೆ ಪ್ರಾದೇಶಿಕ ನಿರ್ದೇಶನಾಲಯದ ನಿರ್ದೇಶಕ ಎ.ಯನ್.ಪೂಜಾರ, ರಾಜ್ಯ ರಾಷ್ಟ್ರೀಯ ಸೇವಾ ಯೋಜನೆಯ ಯುವ ಸಬಲೀಕರಣ ಮತ್ತು ಕ್ರೀಡಾ ವಿಭಾಗದ ಅಧಿಕಾರಿ ಡಾ| ಗಣನಾಥ ಶೆಟ್ಟಿ ಎಕ್ಕಾರ್, ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ವಿನೀತಾ ರೈ, ಯೆನೆಪೋಯ ಸ್ವಾಯುತ್ತೆ ಆಗಲಿರುವ ವಿವಿ ಉಪಕುಲಪತಿ ಡಾ| ಎಂ.ವಿಜಯಕುಮಾರ್ ಕುಲಸಚಿವ ಡಾ| ಜಿ.ಶ್ರೀಕುಮಾರ್ ಮೆನನ್ ಉಪಸ್ಥಿತರಿದ್ದರು.

ಯೆನೆಪೋಯ ಸಮುದಾಯ ಔಷಧ ವಿಭಾಗ ಮುಖ್ಯಸ್ಥ ಡಾ| ಅಭಯ್ ಯಸ್. ನಿರ್ಗುಡೆ ಸ್ವಾಗತಿಸಿದರು. ಡಾ| ವರುಣ್ .ಯನ್ ವಂದಿಸಿದರು.

Exit mobile version