Site icon Ullalavani

ದ.ಕ.ಜಿಲ್ಲೆಯ ಸಹಿತ ನಾಲ್ಕು ಜಿಲ್ಲೆಗಳ ಕಾಂಗ್ರೆಸ್ ಪ್ರಚಾರ ಸಮಿತಿಗೆ ಉಸ್ತುವಾರಿ ವೀಕ್ಷಕರಾಗಿ ಫಾರೂಕ್ ಉಳ್ಳಾಲ್ ನೇಮಕ

UN NETWORKS

ಬೆಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯು ತುಮಕೂರು, ಹಾಸನ, ಕೊಡಗು, ದ.ಕ.ಜಿಲ್ಲೆಗಳ ಕಾಂಗ್ರೇಸ್ ಪಕ್ಷದ ಪ್ರಚಾರ ಸಮಿತಿಯ ಜಿಲ್ಲಾ ಉಸ್ತುವಾರಿ ವೀಕ್ಷಕರಾಗಿ ಉತ್ತಮ ವಾಗ್ಮಿ, ಸಂಘಟಕ ಹಾಗೂ ದ.ಕ.ಜಿಲ್ಲಾ ಕಾಂಗ್ರೇಸ್ ಪಕ್ಷದ ಜಿಲ್ಲಾ ವಕ್ತಾರ ರೂ ಆಗಿದ್ದ ಫಾರೂಕ್ ಉಳ್ಳಾಲ್ ರನ್ನು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ರಾದ ಡಿ.ಕೆ.ಶಿವಕುಮಾರ್ ನೇಮಕಾತಿ ಗೊಳಿಸಿ ಆದೇಶ ಪತ್ರ ನೀಡಿದ್ದಾರೆ.

ವಹಿಸಿರುವ ನಾಲ್ಕು ಜಿಲ್ಲೆಗಳ ಜಿಲ್ಲಾ ಅಧ್ಯಕ್ಷರ ಮತ್ತು ಅಭ್ಯರ್ಥಿಗಳ ನೇರ ಸಂಪರ್ಕವನ್ನಿಟ್ಟು ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಸೂಕ್ತ ನಿರ್ದೇಶನ, ಕಾರ್ಯಕರ್ತರ ಸ್ಪೂರ್ತಿಯನ್ನು ಇಮ್ಮಡಿಗೊಳಿಸಲು ಅಗತ್ಯ ಪ್ರಚಾರ ವೈಖರಿಯನ್ನು ಕೈ ಗೊಳ್ಳವಂತೆಯೂ ನಾಲ್ಕು ಜಿಲ್ಲೆಗಳ ಕ್ಷೇತ್ರವಾರು ಸಮೀಕ್ಷೆಯನ್ನು, ಕುಂದು ಕೊರತೆಗಳನ್ನೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಕೇಂದ್ರ ಕಛೇರಿಗೆ ವರದಿ ಮಾಡುವಂತೆಯೂ ಆದೇಶಿಸಲಾಗಿದೆ.

ತನಗೆ ಪಕ್ಷದ ವರಿಷ್ಠರು ನೀಡಿರುವ ಹೊಣೆಗಾರಿಕೆಯ ಸಲುವಾಗಿ ಫಾರೂಕ್ ಉಳ್ಳಾಲ್ ಈಗಾಗಲೇ ಕರ್ತವ್ಯ ನಿರತರಾಗಿದ್ದಾರೆ ಕೂಡಾ.

Exit mobile version