Site icon Ullalavani

ಉಳ್ಳಾಲ: ಉರೂಸ್ ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ದೇಶದ ವಿವಿಧ ಭಾಗದಲ್ಲಿರುವ ಎಲ್ಲ ದರ್ಗಾಗಳಲ್ಲಿಯೂ ಶಾಂತಿಯ ಸಂದೇಶವನ್ನು ಬಿತ್ತರಿಸಲಾಗುತ್ತದೆ. ಹಾಗಾಗಿ ದರ್ಗಾಕ್ಕೆ ಬರುವವರಲ್ಲಿ ಶೇ. 20ರಷ್ಟು ಜನರು ಬೇರೆ ಬೇರೆ ಧರ್ಮಕ್ಕೆ ಸೇರಿದ ಮುಸ್ಲಿಂಮೇತರ ಬಂಧುಗಳು. ಧಾರ್ಮಿಕ ನೇತಾರರು ನೀಡಿದ ಶಾಂತಿ ಸಾಮರಸ್ಯದ ಸಂದೇಶಗಳು ಚಿರಸ್ಥಾಯಿಯಾಗಿ ಉಳಿದಿರುವುದಿಂದ ಅಲ್ಲಿನ ಪವಾಡಗಳ ನಂಬಿಕೆಯಿಂದಲೇ ಜನರು ದರ್ಗಾಗಳಿಗೆ ಭೇಟಿಕೊಟ್ಟು ತಮ್ಮ ಸಮಸ್ಯೆ ಕಷ್ಟಕಾರ್ಪಣ್ಯ ನೀಗಿಸುವಂತೆ ಪ್ರಾರ್ಥಿಸುವುದನ್ನು ಕಾಣಬಹುದು ಎಂದು ಅಬು ಸುಫಿಯಾನ್ ಮದನಿ ಅಭಿಪ್ರಾಯಪಟ್ಟರು.

ಅವರು ಉಳ್ಳಾಲದಲ್ಲಿ ನಡೆಯುತ್ತಿರುವ ಖುತುಬುಝ್ಝುಮಾನ್ ಹಝ್ರತ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ.) ರವರ 423ನೆಯ ವಾರ್ಷಿಕ ಹಾಗೂ 20ನೆಯ ಪಂಚವಾರ್ಷಿಕ ಉರೂಸ್ ಸಮಾರಂಭದ ಪ್ರಯುಕ್ತ ಬುಧವಾರ ನಡೆದ ಧಾರ್ಮಿಕ ಸಭೆಯಲ್ಲಿ ನ್ಯಾಷನಲ್ ಪೀಸ್ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.

ಇಲ್ಲಿನ ಧಾರ್ಮಿಕ ಮುಖಂಡರಿಗೆ ಅಧಿಕಾರದ ಉದ್ದೇಶ ಇರಲಿಲ್ಲ. ವಿಶಾಲವಾದ ದೃಷ್ಟಿಯಿಂದ ಎಲ್ಲರನ್ನೂ ಪ್ರೀತಿಸುವ ಅದರ್ಶ ಇತ್ತು. ಆವರು ಬೋಧಿಸಿದಂತೆ ಧರ್ಮ ಎಂಬುದು ವೇಷಭೂಷಣ, ಮಠ ಮಂದಿರಗಳಿಗೆ ಸೀಮಿತವಾಗದೆ ಅದೊಂದು ದೈವಿಕವಾದ ವ್ಯವಸ್ಥೆಯಾಗಿದೆ. ಬುದ್ಧಿವಂತ ಮನುಷ್ಯರನ್ನು ಒಳಿತಿನತ್ತ ಕೊಂಡೊಯ್ಯುವ ವ್ಯವಸ್ಥೆ ಎಂದರು.

ಕಾರ್ಯಕ್ರಮದಲ್ಲಿ ಉಳ್ಳಾಲ ಮೊಗವೀರಪಟ್ಣದ ಜೀವರಕ್ಷಕ ಈಜುಗಾರರ ಸಂಘದ ಪ್ರವೀಣ್ ಕೋಟ್ಯಾನ್, ಶಿವಾಜಿ ಜೀವರಕ್ಷಕ ಈಜುಗಾರರ ಸಂಘದ ಕಿರಣ್ ಕುಮಾರ್, ಸಮಾಜ ಸೇವಕ ಅಬ್ದುಲ್ ರವೂಫ್ ಹಾಗೂ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು.

ಅಖಿಲ ಭಾರತ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್‍ನ ಉಪಾಧ್ಯಕ್ಷ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ವಿಷಯ ಮಂಡಿಸಿದರು.

ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಚರ್ಚ್‍ನ ಧರ್ಮಗುರು ಜೆ.ಪಿ.ಸಲ್ದಾನ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಉಳ್ಳಾಲ ನಗರಸಭೆಯ ಕೌನ್ಸಿಲರ್ ದಿನೇಶ್ ರೈ, ಇಂಟೆಕ್‍ನ ಪ್ರಧಾನ ಕಾರ್ಯದರ್ಶಿ ಸದಾಶಿವ ಶೆಟ್ಟಿ, ಭಾರತ್ ಪ್ರೌಢ ಶಾಲಾ ಸಂಚಾಲಕ ಬಾಬು ಬಂಗೇರ, ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಸದಾನಂದ ಬಂಗೇರ, ಮಂಜನಾಡಿ ಜಮಾಅತ್‍ನ ಅಧ್ಯಕ್ಷ ಆಲಿಕುಂಞÂ ಪಾರೆ, ಉಳಿಯ ದೇವಸ್ಥಾನದ ಅಧ್ಯಕ್ಷ ಸಂಜೀವ ಪಡುಮನೆ, ಉಳ್ಳಾಲ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ, ಅಬ್ದುಲ್ ಖಾದರ್, ಉಳ್ಳಾಲ ಪುರಸಭೆಯ ಮಾಜಿ ಕೌನ್ಸಿಲರ್ ದಯಾನಂದ ತೊಕ್ಕೊಟ್ಟು, ದರ್ಗಾ ಸಮಿತಿ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ ವೇ, ಹನೀಫ್ ಹಾಜಿ, ಪ್ರಧಾನ ಕಾರ್ಯದರ್ಶಿ ಯು.ಟಿ.ಇಲ್ಯಾಸ್, ಕಲಂ ಉಸ್ತಾದ್, ಯು.ಟಿ.ತಂಝಿಲ್ ಉಪಸ್ಥಿತರಿದ್ದರು.

ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಯು.ಎಸ್.ಹಂಝ ಸ್ವಾಗತಿಸಿದರು. ಉರೂಸ್ ಮಾಧ್ಯಮ ಸಮಿತಿ ವಿಭಾಗದ ಆರ್.ಕೆ.ಮದನಿ ಕಾರ್ಯಕ್ರಮ ನಿರೂಪಿಸಿದರು.

Exit mobile version