ಉಳ್ಳಾಲ: ಮಂಗಳೂರು ಕ್ಷೇತ್ರ ಬಿಜೆಪಿ ವಿಧಾನಸಭಾ ಚುನಾವಣಾ ಅಭ್ಯರ್ಥಿ ಸಂತೋಷ್ ಕುಮಾರ್ ರೈ ಬೋಳಿಯಾರ್ ಸೋಮವಾರ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸುವ ಮುನ್ನ ಮುಡಿಪುವಿನ ಶ್ರೀ ಕ್ಷೇತ್ರ ಮುಡಿಪಿನ್ನಾರ್ ದೇವಸ್ಥಾನದಲ್ಲಿ ಕುಟುಂಬಸ್ಥರ ಹಾಗೂ ಅಪಾರ ಬೆಂಬಲಿಗರ ಜತೆಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ತೊಕ್ಕೊಟ್ಟುವರೆಗೆ ರೋಡ್ ಷೋ ನಲ್ಲಿ ಭಾಗವಹಿಸಿದರು. ಕಾಪಿಕಾಡು ಬಳಿ ಬಿಜೆಪಿ ಚುನಾವಣಾ ಕಾರ್ಯಾಲಯವನ್ನು ಹಿರಿಯ ಬಿಜೆಪಿ ಮುಖಂಡರು ಉದ್ಘಾಟಿಸಿ ಬಳಿಕ ಪಾದಯಾತ್ರೆ ಮೂಲಕ ಮಂಗಳೂರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಸಾವಿರದಷ್ಟು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದರು.