ಸ್ಯಾಂಡಲ್‍ವುಡ್‍ನ ನಾಯಕ ನಟರು ಹಿನ್ನಲೆ ಗಾಯಕರಾಗಿರುವುದು ಹೊಸದೇನಲ್ಲ ಬಿಡಿ. ಇದು ಸದ್ಯಕ್ಕೆ ಗಾಂಧಿನಗರದಲ್ಲಿ ಹುಟ್ಟಿಕೊಂಡಿರುವ ಹೊಸ ಟ್ರೆಂಡ್.
ಅಭಿನಯದ ಜೊತೆ ಜೊತೆಗೆ ಸಂಗೀತದಲ್ಲೂ ಆಸಕ್ತಿ ಇರುವ ಅನೇಕ ನಾಯಕ ನಟರು ಚಿತ್ರಗಳಲ್ಲಿ ಹಾಡುವ ಮೂಲಕ ಮನೆ ಮಾತಾಗಿದ್ದಾರೆ. ಇದೀಗ ಈ ಪಂಗಡಕ್ಕೆ `ಉಗ್ರಂ’ ಚಿತ್ರದ ನಟ ಶ್ರೀಮುರಳಿ ಕೂಡ ಸೇರ್ಪಡೆಗೊಂಡಿದ್ದಾರೆ.
ಉಗ್ರಂ ಚಿತ್ರದ ಯಶಸ್ವಿನ ನಂತರ ಇದೀಗ `ರಥಾವರ’ ಎಂಬ ಚಿತ್ರದಲ್ಲಿ ಅಭಿನಯಿಸುತ್ತಿರುವ ಮುರಳಿ ತಮ್ಮದೆ ಚಿತ್ರಕ್ಕೆ ಹಾಡನ್ನು ಹಾಡಲು ಮುಂದಾಗಿದ್ದಾರೆ.
ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಲ್ಲಿ, ಯೋಗರಾಜ್ ಭಟ್ ಬರೆದಿರುವ ಹಾಡಿಗೆ ದನಿಯಾಗಲಿದ್ದಾರೆ.
ಸಂಗೀತದ ಬಗ್ಗೆ ಹಿಂದಿನಿಂದಲೂ ಆಸಕ್ತಿ ಇದ್ದ ಮುರಳಿಗೆ ಕೇವಲ ನಟನೆಯಲ್ಲಿ ಮಾತ್ರವಲ್ಲದೆ ಸಂಗೀತದಲ್ಲೂ ಕೂಡ ಸೈ ಎಂಬುವುದನ್ನು ನಿರೂಪಿಸಲಿದ್ದಾರೆ.
ಮುರಳಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಈ ಚಿತ್ರಕ್ಕೆ `ಬುಲ್ ಬುಲ್’ ಖ್ಯಾತಿಯ ರಚಿತಾ ರಾಮ್ ನಾಯಕ ನಟಿಯಾಗಿ ಕಾಣಿಸಿಕೊಳ್ಳಲಿದ್ದು, `ಆನೆಪಟಾಕಿ’ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ಆಕ್ಷನ್ ಕಟ್ ಹೇಳಲಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ನಟನೆಯ ಮೂಲಕ ಸೈ ಎನಿಸಿಕೊಂಡಿರುವ ನಟ ಶ್ರೀ ಮುರಳಿ ಗಾಯಕನಾಗಿಯೂ ಕೂಡ ನಂಬರ್ ಒನ್ ಆಗಲಿ ಎನ್ನುವುದು ಮುರಳಿ ಅಭಿಮಾನಿಗಳ ಆಶಯ.