UN NETWORKS
ಮಂಗಳಗಂಗೋತ್ರಿ : ಇಂದಿನ ಕಾಲಘಟ್ಟಕ್ಕೆ ಇಂಟರ್ನೆಟ್ ಆಫ್ ಥಿಂಗ್ಸ್ ಅತ್ಯವಶ್ಯಕವಾಗಿದ್ದು , ಈ ಕ್ಷೇತ್ರದಲ್ಲಿ ಹೆಚ್ಚು ಸಂಶೋಧನೆ ನಡೆಸುವುದರಿಂದ ಸಮಾಜಕ್ಕೆ ಹಾಗೂ ದೇಶಕ್ಕೆ ದೊಡ್ಡ ಪ್ರಮಾಣದ ಕೊಡುಗೆ ನೀಡಿದಂತಾಗುತ್ತದೆ ಎಂದು ಇನ್‍ಫೋಸಿಸ್‍ನ ಆಸೋಸಿಯೇಟಿವ್ ಉಪಾಧ್ಯಕ್ಷ ಮತ್ತು ಮಂಗಳೂರು ಕೇಂದ್ರದ ಮುಖ್ಯಸ್ಥ ವಾಸುದೇವ ಕಾಮತ್ ಆಭಿಪ್ರಾಯಪಟ್ಟರು.
ಇಂಟರ್ ನೆಟ್ ಮೂಲಕ ಕೃಷಿ, ಆಟೋಮೊಬೈಲ್, ಆಹಾರ, ಗಾರ್ಮೆಂಟ್ ಸೇರಿದಂತೆ ಪ್ರತಿಯೊಂದು ವಸ್ತುವಿಗೂ ಸಂಪರ್ಕಿಸಲು ಸಾಧ್ಯವಿದ್ದು ಆ ನಿಟ್ಟಿನಲ್ಲಿ ಎಲೆಕ್ಟ್ರಾನಿಕ್ಸ್ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ಬಹಳಷ್ಟು ಪ್ರಯೋಜನಕಾರಿಯಾಗಲಿದೆ ಎಂದ ಅವರು ಪ್ರಸ್ತುತ ಚಾಲ್ತಿಯಲ್ಲಿರುವ ಇತರ ಎಲ್ಲ ತಂತ್ರಗಾರಿಕೆಗಳನ್ನು ಮೀರಿಸುವ ಇಂಟರ್‍ನೆಟ್ ಆಫ್ ಥಿಂಗ್ಸ್ ವಿದ್ಯಾರ್ಥಿಗಳಿಗೆ ಹೆಚ್ಚು ಉಪಯೋಗವಾಗುವ ಕಾರಣ ಅದರ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು.
ಮಂಗಳೂರು ವಿವಿಯ ಕುಲಪತಿ ಪ್ರೊ| ಕೆ.ಬೈರಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಗಾರ ನಿಹಾನ್ ಕಮ್ಯುನಿಕೇಶನ್ ಸೊಲ್ಯುಶನ್ ಪ್ರೈ. ಲಿ. ಪ್ರಾಯೋಜಕತ್ವದಲ್ಲಿ ವಿಶ್ವವಿಖ್ಯಾತ ಕಂಪೆನಿ ಐಬಿಎಂನ ಸಹಯೋಗದೊಂದಿಗೆ ಕಾರ್ಯಗಾರ ಆಯೋಜಿಸಲಾಗಿತ್ತು.
ಎಲೆಕ್ಟಾನಿಕ್ಸ್ ವಿಭಾಗ ಮುಖ್ಯಸ್ಥ ಪ್ರೊ| ನವೀನ್ ಕುಮಾರ್ ಎಸ್.ಕೆ.ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಮೇಘ ಹಾಗೂ ಹರೀಶ್ ಕಾರ್ಯಕ್ರಮ ನಿರೂಪಿಸಿದರು.