Site icon Ullalavani

ಮರಿಕ್ಕಳ ಸ್ವಲಾತ್ ವಾರ್ಷಿಕೋತ್ಸವದ ಮತ ಪ್ರವಚನ ಸಮಾರೋಪ

UN NETWORKS

ನರಿಂಗಾನ: ಮರಿಕ್ಕಳ ಜುಮಾ ಮಸ್ಜಿದ್ ವತಿಯಿಂದ ಸ್ವಲಾತ್ ವಾರ್ಷಿಕೋತ್ಸವದ ಪ್ರಯುಕ್ತ ನಡೆದ 3 ದಿವಸಗಳ ಮತ ಪ್ರವಚನ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮವು ಮರಿಕ್ಕಳ ಜುಮಾ ಮಸ್ಜಿದ್ ಖಾಝಿ ಶೈಖುನಾ ಬೇಕಲ್ ಉಸ್ತಾದರ ಅಧ್ಯಕ್ಷತೆಯಲ್ಲಿ ಮಸ್ಜಿದ್ ವಠಾರದಲ್ಲಿ ನಡೆಯಿತು.

ಸಯ್ಯಿದ್ ಝೈನುಲ್ ಆಬಿದ್ ಜಮಾಲುಲೈಲ್ ತಂಙಳ್ ಕಾಜೂರು ಸ್ವಲಾತ್ ವಾರ್ಷಿಕ ಕಾರ್ಯಕ್ರಮದ ನೇತೃತ್ವ ಹಾಗೂ ದುಆ ಮಜ್ಲಿಸ್‍ಗೆ ನೇತೃತ್ವ ನೀಡಿದರು. ಕಾರ್ಯಕ್ರಮದಲ್ಲಿ ಮರಿಕ್ಕಳ ಜುಮಾ ಮಸ್ಜಿದ್ ಖತೀಬ್ ಅಬ್ಬಾಸ್ ಸಖಾಫಿ ಮಡಿಕೇರಿ, ಎಸ್ಸೆಸ್ಸೆಫ್ ದ.ಕ ಜಿಲ್ಲಾಧ್ಯಕ್ಷ ಕೆ.ಪಿ ಸಿರಾಜುದ್ದೀನ್ ಸಖಾಫಿ ಕನ್ಯಾನ, ಮರಿಕ್ಕಳ ಸದರ್ ಉಸ್ತಾದ್ ಝೈನುಲ್ ಆಬಿದ್ ಸಖಾಫಿ, ಮುಅಲ್ಲಿಂ ರಮಳಾನ್ ಮದನಿ ಕಂಬ್ಲಬೆಟ್ಟು, ಮರಿಕ್ಕಳ ಜುಮಾ ಮಸ್ಜಿದ್ ಉಪಾಧ್ಯಕ್ಷ ಅಬ್ಬಾಸ್ ಕೊಡಂಚಿಲ್, ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಚಂದಹಿತ್ತಿಲು, ಕೋಶಾಧಿಕಾರಿ ಹನೀಫ್ ಚಂದಹಿತ್ತಿಲು ಹಾಗೂ ಇನ್ನಿತರ ಜಮಾಅತ್ ನಾಯಕರು ಉಪಸ್ಥಿತರಿದ್ದರು.

ಮರಿಕ್ಕಳ ಖತೀಬ್ ಅಬ್ಬಾಸ್ ಸಖಾಫಿ ಸ್ವಾಗತಿಸಿದರು. ಸದರ್ ಉಸ್ತಾದ್ ಝೈನುಲ್ ಆಬಿದ್ ಸಖಾಫಿ ವಂದಿಸಿದರು.

Exit mobile version