UN NETWORKS
ಪಿಲಾರ್: ಮಹಿಳೆಯರು ನಮ್ಮ ಸನಾತನ ಸಂಸ್ಕೃತಿಯನ್ನು ಪಾಲಿಸಿದರೆ ಸಮಾಜದಲ್ಲಿ ಯಾರು ಮಹಿಳೆಯರನ್ನು ವಕ್ರದೃಷ್ಟಿಯಿಂದ ನೋಡಲು ಸಾಧ್ಯವಿಲ್ಲ, ಪ್ರತಿಯೊಬ್ಬರಿಗೂ ಜೀವನದ ಸ್ವಾತಂತ್ರ್ಯ ನೀಡಿದ ದೇಶ ಇದ್ದರೆ ಅದು ಭಾರತ ಮಾತ್ರ ನಮಗೆ ನೀಡಿದ ಸ್ವಾತಂತ್ರ್ಯದ ದುರುಪಯೋಗ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಮಾತೆಯರಿಗಿದೆ ಎಂದು ಪ್ರಖರ ವಾಗ್ಮಿ, ಯುವ ನ್ಯಾಯವಾದಿ ಸಹನಾ ಕುಮಾರಿ ಸೂಡ ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಕಾಪಿಕಾಡು ಉಮಾಮಹೇಶ್ವರಿ ಕಬ್ಬಡ್ಡಿ ಅಕಾಡೆಮಿ ಅಧ್ಯಕ್ಷ ಗೋಪಿನಾಥ್ ಕಾಪಿಕಾಡ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮೂಕಾಂಬಿಕಾ ಗಾರ್ಮೆಂಟ್ಸ್ ನ ಮಾಲಕ ಚಂದ್ರಹಾಸ್ ಪಂಡಿತ್ ಹೌಸ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಗಿರೀಶ್ ಆಳ್ವ ಮೊರ್ಲ, ಕೊರಗತನಿಯ ಸೇವಾ ಸಮಿತಿ ಅಧ್ಯಕ್ಷ ರಾಜೇಶ್ ಪೂಜಾರಿ, ಮಹಿಳಾ ಸಮಿತಿ ಅಧ್ಯಕ್ಷೆ ಸುಜಯ, ರಾ.ಸ್ವಂ.ಸೇ.ಸಂಘದ ತಾಲೂಕ್ ವ್ಯ.ಪ್ರಮುಖ್ ಅರ್ಜುನ್ ಮಾಡೂರು, ಕೆಟಿಎಸ್‍ಎಸ್‍ನ ಅಧ್ಯಕ್ಷ ಕೀರ್ತಿರಾಜ್, ಕೋಶಾಧಿಕಾರಿ ನಿಶಾಂತ್ , ಉಪಾಧ್ಯಕ್ಷ ಸಂತೋಷ್, ಚಿರಂಜನ್, ಕಾರ್ತಿಕ್, ದೀಕ್ಷಾ, ವನಿತಾ ಉಪಸ್ಥಿತರಿದ್ದರು.
ಸುಶ್ಮಿತಾ ಸ್ವಾಗತಿಸಿದರು. ಪ್ರವೀಣ್ ಎಸ್. ಕುಂಪಲ ಕಾರ್ಯಕ್ರಮ ನಿರೂಪಿಸಿದರು.