Site icon Ullalavani

ಎಸ್ಕೆಎಸ್ಸೆಸ್ಸೆಫ್ ಅಜ್ಜಿನಡ್ಕ, ಉಚ್ಚಿಲ ಶಾಖೆಯ ನೂತನ ಕಚೇರಿ ಉದ್ಘಾಟನೆ

UN NETWORKS

ಉಳ್ಳಾಲ: ಎಸ್ಕೆಎಸ್ಸೆಸ್ಸೆಫ್ ಅಜ್ಜಿನಡ್ಕ ಮತ್ತು ಉಚ್ಚಿಲ ಶಾಖೆಯ ನೂತನ ಶಾಖಾ ಕಚೇರಿಯನ್ನು ದ.ಕ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅದಿತ್ಯವಾರ ಉದ್ಘಾಟಿಸಿದರು.

ಸಯ್ಯಿದ್ ಅಮೀರ್ ತಂಙಳ್ ಕಿನ್ಯಾ ದುಅ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್ಕೆಎಸ್ಸೆಸ್ಸೆಫ್ ಅಜ್ಜಿನಡ್ಕ ಉಚ್ಚಿಲ ಶಾಖಾಧ್ಯಕ್ಷ ಹಿದಾಯತುಲ್ಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಸಮಸ್ತ ಕರ್ನಾಟಕ ಜಂಇಯ್ಯತುಲ್ ಉಲಮಾ ಮುಶಾವರ ಕಾರ್ಯದರ್ಶಿ ಇಬ್ರಾಹೀಂ ಬಾಖವಿ ಕೆ.ಸಿರೂಡು, ಅಜ್ಜಿನಡ್ಕ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಸುಲೈಮಾನ್ ಹಾಜಿ, ದ.ಕ ಜಿಲ್ಲಾ ಮದರಸ ಮೇನೆಜ್‍ಮೆಂಟ್ ಉಪಾಧ್ಯಕ್ಷ ಇಬ್ರಾಹೀಂ ಕೊಣಾಜೆ, ಉಚ್ಚಿಲ ಅಲ್-ಮುಬಾರಕ್ ವೆಲ್ಫೆರ್ ಎಸೋಸಿಯೇಶನ್ ಅಧ್ಯಕ್ಷ ಮುಹ್ಸಿನ್ ರಹ್ಮಾನ್, ಗಡಿನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದೀಕ್ ತಲಪಾಡಿ, ಎಸ್ಕೆಎಸ್ಸೆಸ್ಸೆಫ್ ಅಜ್ಜಿನಡ್ಕ ಉಚ್ಚಿಲ ಶಾಖೆಯ ಕಾರ್ಯದರ್ಶಿ ಮೊಹಮ್ಮದ್ ಹನೀಫ್ ಎಸ್.ಬಿ, ಸದಸ್ಯರಾದ ಹಮೀದ್ ಹಾಜಿ, ಸಮಾಜ ಸೇವಕರಾದ ಸಲೀಂ ಅಬ್ಬಾಸ್ ಉಚ್ಚಿಲ,ಅಹ್ಮದ್ ಪೇರಿಬೈಲ್, ಇಸ್ಮಾಯಿಲ್ ಎನ್. ಎನ್ ಮೊೈದೀನ್ ಕುಂಞ, ಈ ಸಂದರ್ಭ ಉಪಸ್ಥಿತರಿದರು. ಅಬ್ದುಲ್ಲಾ ಅರ್ಶದಿ ಕೆ.ಸಿ ರೋಡು ಸ್ವಾಗತಿಸಿದರು.ಬಶೀರ್ ಅಜ್ಜಿನಡ್ಕ ವಂದಿಸಿದರು.

Exit mobile version