Site icon Ullalavani

ಕಿನ್ಯಾದ ಉಕ್ಕುಡದಲ್ಲಿ ನ್ಯಾಯಕ್ಕಾಗಿ ಪ್ರತಿಭಟನೆ

UN NETWORKS

ಕಿನ್ಯಾ: ಕಾಶ್ಮೀರದ 8 ಹರೆಯದ ಆಸೀಫ ಎಂಬ ಪುಟ್ಟ ಕಂದಮ್ಮ ಮೇಲೆ ಅತ್ಯಾಚಾರವೆಸಗಿ ಅತಿ ದಾರುಣವಾಗಿ ಹತ್ಯೆಗೈದ ರಕ್ಷಾಸಿ ಗಳಿಗೆ ಅತಿ ಕಠಿಣ ಶಿಕ್ಷೆ ಯಾಗುವಂತೆ ಒತ್ತಾಯಿಸಿ 15-04-2018 ಸಂಜೆ 7.30 ಕ್ಕೆ ಸರಿಯಾಗಿ ಉಕ್ಕುಡ ಜಂಕ್ಷನ್ ನಲ್ಲಿ ನಡೆದಿದ್ದು, ಇಂದು ವಿಶ್ವದ ಎದುರಿಗೆ ಭಾರತ ತಲೆತಗ್ಗಿಸಿದೆ, ಇಂತಹ ಕ್ರೂರ ಕೃತ್ಯಗಳು ಮುಂದಕ್ಕೆ ಸಮಾಜದಲ್ಲಿ ನಡೆಯದಿರಲೀ ಹಾಗೂ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡುವಲ್ಲಿ ಕಾನೂನು ಯಶಸ್ವಿಯಾಗಲಿ ಎಂದು ಹಬೀಬ್ ಉಸ್ತಾದರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಶಾಂತಿ ಸೌಹಾರ್ಧ ನೆಲೆಸಿರುವ ಭಾರತ ಪುಣ್ಯ ಭೂಮಿಯಲ್ಲಿ ದೇಶದ ಗೌರವಕ್ಕೆ ಕಲಂಕ ತಂದಿರುವ ಕೃತ್ಯ ಬಹಳ ಖಂಡನೀಯ ಹಾಗೂ ಖೇದಕರ ಅಪರಾಧಿಗಳಿಗೆ ಗಲ್ಲು ವಿಧಿಸಿ ಆಪುಟ್ಟ ಬಾಲಕಿಗೆ ನ್ಯಾ ಯ ದೊರಕುವಲ್ಲಿ ಯಶಸ್ವಿಯಾಗಲಿ ಎಂದು ಫಾರೂಕ್ ಕಿನ್ಯ. ನುಡಿದರು.

ಹಸೈನಾರ್ , ಇಬ್ರಾಹಿಂ , ಅಹಮ್ಮದ್ , ಅಶ್ರಫ್, ಅಬ್ದುಲ್ಲ, ಹೈದರ್ , ಮುಂತಾದ ಹಿರಿಯರು ಹಾಜರಿದ್ದರು. ಆಸಿಫಾ ಎಂಬ ಪುಟ್ಟ ಬಾಲಕಿಯ ಅತ್ಯಾಚಾರವನ್ನು ನಾವು ಪ್ರಬಲವಾಗಿ ಖಂಡಿಸುತ್ತಾ,ನ್ಯಾಯ ದೊರಕುವಲ್ಲಿ ಯಶಸ್ವಿಯಾಗಲಿ ಹಾಗು ಅಫರಾಧಿಯನ್ನು ಗಲ್ಲಿಗೇರಿಸಿ ಕಂದಮ್ಮಗೆ ನ್ಯಾಯ ದೊರಕಲೀ.

 

Exit mobile version