UN NETWORKS
ಕೈರಂಗಳ: ಮಕ್ಕಳು ತಮ್ಮ ತಮ್ಮ ಮನೆಯಲ್ಲಿ ಗಿಡಗಳನ್ನು ನೆಟ್ಟು ಬೆಳೆಸಿ ನಿಜವಾದ ಅರ್ಥದಲ್ಲಿ ವನಮಹೋತ್ಸವ ಆಚರಿಸಬೇಕು. ಯಾವುದೇ ಫಲಾಪೇಕ್ಷೆಯಿಲ್ಲದೆ ಸಾಲು ಮರಗಳನ್ನು ನೆಟ್ಟು ಬೆಳೆಸಿದ ಸಾಲುಮರದ ತಿಮ್ಮಕ್ಕ ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಪರಿಸರ ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಂಸ್ಥೆಯ ಸಂಚಾಲಕ ಟಿ.ಜಿ.ರಾಜರಾಮ ಭಟ್ ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಬಂಟ್ವಾಳ ವಲಯದ ಅರಣ್ಯ ಅ„ಕಾರಿ ರಾಜೇಶ್ ಬಳಿಗಾರ್ ಅವರು ಮಾತನಾಡಿ ವನಮಹೋತ್ಸವದ ಔಚಿತ್ಯವನ್ನು ವಿವರಿಸಿ ಕಾಡುಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ಧಾರಿ ನಮ್ಮ ಮೇಲಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಸಂಸ್ಥೆಯ ಮಾರ್ಗದರ್ಶಕ ಶಂಕರಭಟ್ ಶುಭ ಹಾರೈಸಿದರು. ಸಹಶಿಕ್ಷಕಿ ಕುಮಾರಿ ಸೌಮ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆಡಳಿತ ಮಂಡಳಿಯ ಹಿರಿಯ ಸದಸ್ಯರಾದ ಬಾಲಕೃಷ್ಣ ರೈ ಮುಂಡಾಜೆ, ಪ್ರಾಂಶುಪಾಲೆ ದಿವ್ಯದೀಪ, ಉಪಪ್ರಾಂಶುಪಾಲ ಸೋಮಶೇಖರ್ ಎಂ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶಾರ್ವರಿ ಸ್ವಾಗತಿಸಿ, ಭೂಮಿಕಾ ವಂದಿಸಿದರು. ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು.