UN NETWORKS
ಕೈರಂಗಳ: ಕೈರಂಗಳ ಪುಣ್ಯಕೋಟಿ ನಗರದ ಅಮೃತಧಾರೆ ಗೋಶಾಲೆಯಿಂದ ಗೋ ಕಳವು ಪ್ರಕರಣ ಮತ್ತು ಗೋ ಹಂತಕರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಹಿರಿಯರಾದ ರಾಜಾರಾಮ್ ಭಟ್‍ರವರ ಉಪವಾಸ ಸತ್ಯಾಗ್ರಹಕ್ಕೆ ಪರಿಸರದ ಸರ್ವ ಧರ್ಮಿಯರು ಸ್ಪಂದಿಸಿರುವುದು ಸ್ವಾಗತರ್ಹ.
ಆದರೆ ಕಾಂಗ್ರೇಸ್ ಈ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದ ಗೋಶಾಲೆಯ ಕಾವಲುಗಾರರನ್ನೇ ತನಿಖೆಗೆ ಒಳಪಡಿಸಬೇಕೆಂದು ಹೇಳಿಕೆ ಕೊಟ್ಟಿರುವುದು ಕ್ಷೇತ್ರದಲ್ಲಿ ನಡೆದಿರುವ ಗೋಕಳ್ಳತನಕ್ಕೆ ಇವರದ್ದೇ ಶ್ರೀ ರಕ್ಷೆ ಇರುವುದನ್ನು ತೋರಿಸುತ್ತದೆ ಎಂದು ಮಂಗಳೂರು ಕ್ಷೇತ್ರ ಬಿ.ಜೆ.ಪಿ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್ ಆರೋಪಿಸಿದ್ದಾರೆ.
ಆಸ್ತಿಕ ಬಂಧುಗಳು ದೈವ ದೇವಸ್ಥಾನಗಳಲ್ಲಿ ಗೋ ಸಂರಕ್ಷಣೆ ಬಗ್ಗೆ ಸಾಮೂಹಿಕ ಪ್ರಾರ್ಥನೆಗೈದರೆ,ಕಾಂಗ್ರೇಸಿಗರು ರಾಜಕೀಯ ಪ್ರೇರಿತವಾಗಿ ಖಾದರ್ ಚುನಾವಣೆಯಲ್ಲಿ ಗೆಲ್ಲಬೇಕೆಂದು ಪ್ರಾರ್ಥನೆ ಮಾಡುತ್ತಿದ್ದಾರೆ. ಎಂದು ಮಂಗಳೂರು ಮಂಡಲ ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್ ಆರೋಪಿಸಿದರು.
ಗೋಹಂತಕರನ್ನು ಸಮಾಜಘಾತುಕರನ್ನು ಗಾಂಜಾ ಮಾಫೀಯದವರನ್ನು ಬೆಳೆಯಲು ಬಿಟ್ಟು ಈಗ ಪ್ರಾರ್ಥನೆ ಮಾಡಿದರೆ ಲಾಭವಿಲ್ಲ.ಖಾದರ್ ಜನರನ್ನು ಮರಳು ಮಾಡಲು ಗಿಮಿಕ್ಸ್ ರಾಜಕೀಯ ಬಿಡಲಿ ಗೋಕಳ್ಳರ ವಿರುದ್ಧ ಪ್ರಾರ್ಥನೆ ಮಾಡಲಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..