UN NETWORKS
ಕೈರಂಗಳ: ದೇಶದ ಪರಿಸ್ಥಿತಿ ಕಂಡು ಅತ್ಯಂತ ದುಖವಾಗುತ್ತಿದೆ. ದೇಶದೆಲ್ಲೆಡೆ ಅರಾಜಕತೆ ಬೇಸರ ತರಿಸುತ್ತಿದೆ ಎಂದು ಪೇಜಾವರ ಶ್ರೀ ಹೇಳಿದರು.
ಆಕ್ರಮ ನಡೆಯಬಾರದು. ಗೋ ರಕ್ಷಣೆ ಮಾಡಬೇಕು.
ಅಪರಾಧಿಗಳು ಯಾರು ಎಂದು ಪ್ರತ್ಯಕ್ಷವಾಗಿ ನೋಡಿದವರಿದ್ದರೂ ಸರಕಾರ ಬಂಧಿಸುತ್ತಿಲ್ಲ. ಪೊಲೀಸ್ ಅಧಿಕಾರಿಗಳು ನಿಷ್ಕ್ರಿಯ ರಾಗ ಇದ್ದಾರೆ. ಕೃಷ್ಣನಿಗೆ ಅರ್ಪಣೆ ಭಟ್ ಕಾರ್ಯ. ಸಹಸ್ರ ಸಹಸ್ರ ಜನ ಭಾಗಿಗಳಾಗಬೇಕು. ಸರಕಾರಕ್ಕೆ ಮಾನವೀಯತೆ ಇದ್ದರೆ ಮಾತ್ರ ಉಪವಾಸ ಫಲ ಕೊಡದು. ಹಾಗಾಗಿ ಹೋರಾಟ ಹಿಂಸಾತ್ಮಕವಾಗಿಯೂ ಬೇಡ, ಉಪವಾಸವೂ ಬೇಡ, ಪರ್ಯಾಯ ಹೋರಾಟ ಮಾಡೋಣ. ನನ್ನ ಆರೋಗ್ಯ ಹಾಳಾಗಿದೆ. ಹಾಗಿದ್ದರೂ ಗೋವಿಗಾಗಿ ಮುಂದೆ ನಡೆಯುವ ಹೋರಾಟದಲ್ಲಿ ನಿಮ್ಮೆಲ್ಲರ ಜೊತೆಗೆ ಭಾಗಿಯಾಗಲಿದ್ದೇನೆ. ಶಿವ ಲೋಕ ಕಲ್ಯಾಣಕ್ಕಾಗಿ ವಿಷ ಕುಡಿದ, ಇಲ್ಲಿ ಲೋಕ ಕಲ್ಯಾಣಕ್ಕಾಗಿ ಭಟ್ ಸೇವೆ ಸಲ್ಲಿಸಿದ್ದಾರೆ ಎಂದರು.
ಶ್ರೀಕೃಷ್ಣನ ಪ್ರಸಾದ ತಿನ್ನಿಸಿ, ಕ್ಷೀರ ಕುಡಿಸಿದ ಪೇಜಾವರ ಶ್ರೀ ಒಂಬತ್ತು ದಿನಗಳ ಕಾಲ ಆಮರಣಾಂತ ಉಪವಾದ ಕೈಗೊಂಡಿದ್ದ ರಾಜಾರಾಮ್ ಭಟ್ ಅವರ ಉಪವಾಸಕ್ಕೆ ತಾತ್ಕಾಲಿಕ ಅಂತ್ಯ ಹಾಡಿದ ಬಳಿಕ ಪೇಜಾವರ ಶ್ರೀ ಮಾತನಾಡಿದರು.
ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾದ ಎಲ್ಲರಿಗೂ ಟಿ.ಜಿ. ರಾಜಾರಾಂ ಭಟ್ ಧನ್ಯವಾದ ಸಲ್ಲಿಸಿದರು.
ಡಾ. ಕಲ್ಲಡ್ಕ ಪ್ರಭಾಕರ ಭಟ್, ಶೈಲಜ ಮಂಗಳೂರು, ಪ್ರೊ. ಎಂ.ಬಿ. ಪುರಾಣಿಕ್, ನಂದರಾಜ ಶೆಟ್ಡಿ ಪಿಜಿನಬೈಲ್, ನೀರೊಳಿಕೆ ಸೇವಾಶ್ರಮದ ಪ್ರಭಾವತಿ, ಜಗದೀಶ್ ಕುವ್ವೆತ್ತಬೈಲ್ ಉಪಸ್ಥಿತರಿದ್ದರು.