UN NETWORKS
ಕೈರಂಗಳ: ಗೋದರೋಡೆಕೋರರ ಬಂಧನ ಆಗ್ರಹಿಸಿ ಎ. 1ರಿಂದ ಆಮರಣಾಂತ ಉಪವಾಸ ಕೈಗೊಂಡಿದ್ದ ಟಿ.ಜಿ.ರಾಜಾರಾಂ ಭಟ್ ಅವರು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನೀಡಿದ ಭರವಸೆಗೆ ನಿರಶನಕ್ಕೆ ತಾತ್ಕಾಲಿಕ ಅಂತ್ಯ ಹಾಡಿದ್ದಾರೆ.
*ಅಧಿಕಾರಿಗಳು ನನ್ನ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ನಿರಶನ ಕೈಬಿಟ್ಟಿದ್ದೇನೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ನೂತನವಾಗಿ ಯಾವುದೇ ಸರಕಾರ ಆಡಳಿತಕ್ಕೆ ಬಂದು ಅಮೃತಧಾರ ಗೋ ಶಾಲೆಯಿಂದ ಗೋ ದರೋಡೆಗೈದ ಅಪರಾಧಿಗಳ ಬಂಧನ, ಮಾದಕ ದ್ರವ್ಯ ಸಾಗಾಟ ಪೂರೈಕೆ, ಕರ್ನಾಟಕ ಕೇರಳ ರಾಜ್ಯದ ಆರು ಚೆಕ್ ಪಾಯಿಂಟ್ ತಡೆಯೊಡ್ಡಿ ಈ ಭಾಗದಿಂದ ಯಾವುದೇ ಕಳ್ಳಸಾಗಣೆಗೆ ಅವಕಾಶ ಕೊಡಬಾರದು ಎಂಬ ಬೇಡಿಕೆ ಇಡಲಾಗಿದೆ. ಕರ್ನಾಟಕ ಪೊಲೀಸ್ ಬಗ್ಗೆ ನಂಬಿಕೆ ಇದೆ.
ಟಿ.ಜಿ.ರಾಜಾರಾಂ ಭಟ್
*ರಾಜಾರಾಂ ಭಟ್ ಅವರಲ್ಲಿ ಗೋಕಳ್ಳರನ್ನು ಅತೀ ಶೀಘ್ರದಲ್ಲಿ ಬಂಧಿಸುವುದಾಗಿ ಹೇಳಿದ್ದು,ಉಪವಾಸ ನಿರಶನ ಕೈಬಿಡಲು ಕರೆ ನೀಡಿದ್ದು,ಅದಕ್ಕೆ ಸ್ಪಂದಿಸುವುದಾಗಿ ಭಟ್ ಹೇಳಿದ್ದಾರೆ.
ಟಿ.ಆರ್ .ಸುರೇಶ್, ಪೊಲೀಸ್ ಆಯುಕ್ತರು