UN NETWORKS
ತೊಕ್ಕೊಟ್ಟು: ಮುಂದಿನ ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದ ಶಾಸಕ ಹಾಗೂ ಸಚಿವ ಯು.ಟಿ. ಖಾದರ್ ಅವರ ಚುನಾವಣಾ ಪ್ರಚಾರ ಕಾರ್ಯ ನಿರ್ವಿಘ್ನವಾಗಿ ನಡೆಯಲಿ ಮತ್ತು ಕ್ಷೇತ್ರದಲ್ಲಿ ಅತ್ಯಧಿಕ ಮತಗಳಿಂದ ಜಯಿಸಲಿ ಎಂದು ತೊಕ್ಕೊಟ್ಟು ಓವರ್ ಬ್ರಿಡ್ಜ್ ಕೊರಗಜ್ಜ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.
ಈ ಸಂದರ್ಭದಲ್ಲಿ ಸಚಿವ ಯು.ಟಿ. ಖಾದರ್, ಉಮಾಮಹೇಶ್ವರೀ ದೇವಸ್ಥಾನದ ಮೊಕ್ತೇಸರ ಈಶ್ವರ ಉಳ್ಳಾಲ್ ಮಾತನಾಡಿ ದೇವಸ್ಥಾನ ಮತ್ತು ದೈವಸ್ಥಾನಗಳಿಗೆ ಯು.ಟಿ. ಖಾದರ್ ಪ್ರವೇಶದ ವಿಚಾರದಲ್ಲಿ ಕೆಲವರು ನಿಂದನಾತ್ಮಕ ಹೇಳಿಕೆ ನೀಡುತ್ತಿರುವುದು ಖೇದನೀಯ ದೇವಸ್ಥಾನಗಳಲ್ಲಿ ಎಲ್ಲಾ ಧರ್ಮದವರಿಗೂ ಸಮಾನ ಪ್ರಾತಿನಿದ್ಯವಿದೆ ಎಂದರು.
ಈ ಸಂದರ್ಭದಲ್ಲಿ ರವೀಂದ್ರ ಗುರಿಕಾರ, ಅಧ್ಯಕ್ಷ ಮೋಹನ್‍ದಾಸ್ ಕಾಪಿಕಾಡ್, ರವಿ.ಎಸ್. ಗಾಂಧಿನಗರ, ಮುರಳಿ ಮೋಹನ್ ಸಾಲ್ಯಾನ್, ಬಾಝಿಲ್ ಡಿ.ಸೋಜ, ಉದಯ ಕುಮಾರ್, ವಸಂತ್ ಭಟ್ನಗರ, ಭಾಸ್ಕರ ತೊಕ್ಕೊಟ್ಟು ರಾಜೇಂದ್ರ ಬಂಡಸಾಲೆ, ಕಿಶೋರ್ ಕುಮಾರ್, ಉದಯ ಗಾಂಧಿನಗರ, ಚಂದ್ರಹಾಸ್, ವಸಂತ್ ಫ್ಲವರ್, ಚಂದ್ರಹಾಸ್ ಗಣೇಶ್‍ನಗರ, ವಿಜಯ್, ಯಶೋಧರ ಭಟ್ನಗರ, ಸಚಿನ್, ಶರಣ್ ಹಂಸರಾಜ್ ಮತ್ತಿತರರು