UN NETWORKS
ಉಳ್ಳಾಲ: ಶಿಕ್ಷಣ ಸಂಸ್ಥೆಗಳು ಮಾಕ್ರ್ಸ್, ಪ್ಲೇಸ್‍ಮೆಂಟ್ ಹಾಗೂ ಶೈಕ್ಷಣಿಕ ಅಭಿವೃದ್ಧಿಯಲ್ಲೇ ಹೆಚ್ಚಾಗಿ ತೊಡಗಿಸಿಕೊಂಡು , ಸಂಶೋಧನೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಎಂದು ವಿಧಾನಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಅಭಿಪ್ರಾಯಪಟ್ಟರು.
ಮುಪ್ಪಾದರೂ ಒಳಗಿರುವ ಬಾಲ್ಯವನ್ನು ಸಾಯಲು ಬಿಡಬಾರದು. ಜ್ಞಾನೋದಯಕ್ಕೆ ಶಿಕ್ಷಣ ಸಹಕಾರಿ. ಶಿಕ್ಷಣದ ಜತೆಗೆ ಬಾಲ್ಯವನ್ನು ಮೈಗೂಡಿಸಿಕೊಳ್ಳುತ್ತಾ ಸಂಶೋಧನೆಗಳಿಗೆ ಹೆಚ್ಚಿನ ಒತ್ತನ್ನು ನೀಡುತ್ತಾ ವಿದ್ಯಾರ್ಥಿಗಳು ಮುಂದುವರಿಯಬೇಕು. ಶಿಕ್ಷಣ ಸಂಸ್ಥೆಗಳು ಸಂಶೋಧನೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದು ದೇಶದ ಅಭಿವೃದ್ಧಿಗೂ ಮಾರಕವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸಂಶೋಧನೆಗಳಿಗೆ ಪ್ರತ್ಯೇಕ ವಿಭಾಗವನ್ನು ಸ್ಥಾಪಿಸಿ ಸಂಶೋಧಕರಿಗೆ ಪ್ರೋತ್ಸಾಹ ನೀಡುವ ಕಾರ್ಯ ನಿಟ್ಟೆ ಸಂಸ್ಥೆಯಿಂದ ಆಗುತ್ತಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿ ನಿಟ್ಟೆ ವಿ.ವಿ ಸಹಕುಲಪತಿ ಡಾ| ಎಂ.ಯಸ್.ಮೂಡಿತ್ತಾಯ ಭಾಗವಹಿಸಿದ್ದರು. ವಿದ್ಯಾರ್ಥಿ ಕೌನ್ಸಿಲ್ ಅಧ್ಯಕ್ಷೆ ರಿಯಾ ಡಿಸೋಜಾ ಅತಿಥಿಗಳ ಪರಿಚಯಿಸಿದರು.
ನಿಟ್ಟೆ ವಿಶ್ವವಿದ್ಯಾಲಯದ ವಿಜ್ಞಾನ, ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ| ಇಂದ್ರಾಣಿ ಕರುಣಾಸಾಗರ್ ಸ್ವಾಗತಿಸಿದರು. ಪ್ರೊ. ಡಾ| ಅನಿರ್ಬಾನ್ ಚಕ್ರಬರ್ತಿ ವಾರ್ಷಿಕ ವರದಿ ವಾಚಿಸಿದರು. ಡಾ| ಸ್ಮಿತಾ ಹೆಗ್ಡೆ ವಂದಿಸಿದರು.