Site icon Ullalavani

ವಿದ್ಯಾರ್ಥಿಗಳು ಬಲಿಷ್ಠವಾದಲ್ಲಿ ದೇಶ ಬಲಿಷ್ಠವಾಗಬಹುದು: ಸಚಿವ ಖಾದರ್

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಬಲಿಷ್ಠವಾದಲ್ಲಿ ದೇಶ ಬಲಿಷ್ಠವಾಗಬಹುದೇ ಹೊರತು ಸಚಿವರು ಐಎಎಸ್ ಅಧಿಕಾರದ ಆಡಳಿತದಿಂದ ಆಗದು. ಉಳ್ಳಾಲ ದರ್ಗಾ ಸಮಿತಿ ನ್ಯಾಷನಲ್ ಇಂಟರ್‍ಗ್ರೇಶನ್ ಕಾನ್ಫರೆನ್ಸ್ ಹಮ್ಮಿಕೊಂಡಿರುವುದರಿಂದ ರಾಷ್ಟ್ರೀಯ ಭಾವೈಕ್ಯತೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.

ಅವರು ಉಳ್ಳಾಲ ದರ್ಗಾ ಉರೂಸ್ ಪ್ರಯುಕ್ತ ಶುಕ್ರವಾರ ನಡೆದ ನ್ಯಾಷನಲ್ ಇಂಟೆಗ್ರೇಶನ್ ಕಾನ್ಫರೆನ್ಸ್‍ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸಮಾಜದ ಅಭಿವೃದ್ಧಿ, ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ ನಮ್ಮೆಲ್ಲರ ಗುರಿಯಾಗಿದೆ. ಸಂಘರ್ಷಕ್ಕೆ ಆಸ್ಪದ ಕೊಡಲು ಯಾರೂ ಕೂಡಾ ಇಷ್ಟಪಡುವುದಿಲ್ಲ. ಅದಕ್ಕೆ ಪ್ರೋತ್ಸಾಹ ಕೂಡಾ ನೀಡುವುದಿಲ್ಲ. ನಮಗೆ ಅಗತ್ಯವಾಗಿ ಬೇಕಾಗಿರುವುದು ಶಿಕ್ಷಣ. ಶಿಕ್ಷಣ ಬೆಳೆದರೆ ಮಾತ್ರ ಸಮಸ್ಯೆಗಳು ಕಡಿಮೆಯಾಗಬಹುದು. ಶಿಕ್ಷಣ ಅಭಿವೃದ್ಧಿಗೆ ನಾವು ಪ್ರೋತ್ಸಾಹ ನೀಡಬೇಕು. ಯುವಕರು ಉತ್ತಮ ಶಿಕ್ಷಣ ಪಡೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಬೇಕು ಎಂದರು.

ನಗರಾಭಿವೃದ್ಧಿ ಪ್ರಾಧಕಾರದ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ನೀತಿಯನ್ನು ಅನುಕರಣೆ ಮಾಡಿರುವುದು ಭಾವೈಕ್ಯತೆಯಿಂದಾಗಿದೆ. ವಿವಿಧತೆಯಲ್ಲಿ ಏಕತೆ ಇರುವುದು ಭಾರತದಲ್ಲಿ. ವಿವಿಧ ಜಾತಿ, ಧರ್ಮಕ್ಕೆ ಸೇರಿದ ಜನರು ಇದ್ದರೂ ಅವರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಸಮಾನ ನೀತಿಯನ್ನು ಕಲ್ಪಿಸಬೇಕು. ಸರಕಾರ ಯಾವುದೂ ಕೂಡಾ ಬಂದರೂ ರಾಷ್ಟ್ರೀಯ ಭಾವೈಕ್ಯತೆಗೆ ಮಹತ್ವ ನೀಡಬೇಕು. ಉಳ್ಳಾಲ ದರ್ಗಾ ಜಾತಿ, ಧರ್ಮ,ಬೇಧವಿಲ್ಲದೇ ಸಮಾನತೆ ಕಲ್ಪಿಸುವ ಕ್ಷೇತ್ರವಾಗಿ ಬೆಳೆದಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಳ್ಳಾಲ ದರ್ಗಾ ಅಧ್ಯಕ್ಷ ಯು.ಎಸ್. ಹಂಝ ರವರು ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿ ಸೆಯ್ಯದ್ ಮದನಿ ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಅಭಿವೃದ್ಧಿಗೆ ಬಹಳಷ್ಟು ಮಂದಿ ಸಹಕಾರ ನೀಡಿದ್ದಾರೆ. ಅಲ್ಲದೇ ಸರಕಾರದಿಂದ ಸರಕಾರಿ ಅಧಿಕಾರಿಗಳ ಸಹಕಾರದಿಂದ ಈ ಕಾರ್ಯಕ್ರಮ ನಡೆಯುತ್ತಿದೆ. 25 ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಯಾಗಿ ವಕ್ಫ್ ಬೋರ್ಡ್‍ನ ಜಿಲ್ಲಾಧ್ಯಕ್ಷ ರಶೀದ್ ಹಾಜಿ, ಸೆಂಟ್ರಲ್ ಕಮಿಟಿ ಅಧ್ಯಕ್ಷ ಮಹಮ್ಮದ್ ಮಸೂದ್, ದ.ಕ. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಎಚ್. ಖಾದರ್ ಬಂಟ್ವಾಳ,ಕುದ್ರೋಳಿ ಮಸೀದಿ ಅಧ್ಯಕ್ಷ ಅಬೂಬಕರ್ ಕುದ್ರೋಳಿ, ಯು.ಎಚ್. ಹಸೈನಾರ್ ಉಳ್ಳಾಲ್, ಪಟ್ಟಾಡಿ ಮಾಲಕರು ಇಬ್ರಾಹಿಂ ಹಾಜಿ ಮೂಡಬಿದ್ರೆ ,ಮುಫತ್ತಿಶ್ ಸುಲೈಮಾನ್ ಸಖಾಪಿ, ಸಿ.ಓ. ಹಾಜಿ ಅಬ್ದುಲ್ ಲತೀಫ್, ದರ್ಗಾ ಪ್ರ. ಕಾರ್ಯದರ್ಶಿ ಯು.ಟಿ. ಇಲ್ಯಾಸ್, ಉಪಾಧ್ಯಕ್ಷ ಅಶ್ರಫ್ ರೈಟ್‍ವೇ , ಅಝೀಝ್ ಸಖಾಫಿ, ಮುಸ್ತಫಾ ಹಾಜಿ ಮೊದಲಾದವರು ಉಪಸ್ಥಿತರಿದ್ದರು. ಕಲಾಂ ಸಖಾಫಿಅಝ್‍ಅರಿ ಪ್ರಾಸ್ತಾವಿಕ ಭಾಷಣ ಮಾಡಿದರು.ಅರೆಬಿಕ್ ಎಜುಕೇಶನಲ್ ಟ್ರಸಟ್ ಕಾರ್ಯದರ್ಶಿ ಝಿಯಾ ತಂಙಳ್ ದುವಾ ನೆರವೇರಿಸಿದರು. ದಅïವಾ ಕಾಲೇಜು ವಿದ್ಯಾರ್ಥಿ ಬಾಯ್ಸ್ ಕಿರಾಅತ್ ಪಠಿಸಿದರು.

Exit mobile version