Site icon Ullalavani

ಕ್ಷೇಮ ಆಸ್ಪತ್ರೆಯಲ್ಲಿ ಪೇಷಂಟ್ ಲಿಫ್ಟ್ ಸಿಸ್ಟಂ ಬಿಡುಗಡೆ

UN NETWORKS

ಉಳ್ಳಾಲ: ಸದಾ ರೋಗಿಗಳ ಆರೈಕೆಯಲ್ಲಿ ತೊಡಗಿರುವ ದಾದಿಯರ ಕೆಲಸ ಸುಗಮವಾಗಲು ಹಾಗೂ ವೈದ್ಯರು, ಅರೆವೈದ್ಯಕೀಯ ವಿಭಾಗದವರಿಗೆ `ಪೇಷೆಂಟ್ ಲಿಪ್ಟ್ ಸಿಸ್ಟಂ’ನಿಂದ ಅನುಕೂಲವಾಗಲಿದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ ಹೇಳಿದ್ದಾರೆ.

ಅವರು ನಿಟ್ಟೆ ವಿಶ್ವವಿದ್ಯಾಲಯದ ವೈದ್ಯಕೀಯ ಉಪಕರಣ ಅಭಿವೃದ್ಧಿ ಯೋಜನೆಯಡಿ ವಿನ್ಯಾಸಗೊಂಡು ತಯಾರಿಸಲಾದ `ಪೇಷಂಟ್ ಲಿಫ್ಟ್ ಸಿಸ್ಟಂ’ ಉಪಕರಣವನ್ನು ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.

ಆಸ್ಪತ್ರೆಯಲ್ಲಿ ರೋಗಿಗಳನ್ನು ಸ್ಥಳಾಂತರಗೊಳಿಸುವಾಗ ಸಿಬ್ಬಂದಿ ಬಹಳ ತೊಂದರೆ ಅನುಭವಿಸುತ್ತಾರೆ. ನರ್ಸುಗಳು, ವೈದ್ಯರು , ಅರೆವೈದ್ಯಕೀಯ ವಿಭಾಗದವರ ತೊಂದರೆಯನ್ನು ಗಮನಿಸಿ ಉಪಕರಣವನ್ನು ಬಿಡುಗಡೆಗೊಳಿಸಲಾಗಿದೆ ಎಂದರು.

ಉಪಕರಣವನ್ನು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ಸಹಪ್ರಾಧ್ಯಾಪಕ ಮೆಲ್ವಿನ್ ಕ್ಯಾಸ್ಟಲಿನೋ ಅವರ ನಿರ್ದೇಶನದಂತೆ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ಮೆಕ್ಯಾನಿಕಲ್ ವಿದ್ಯಾರ್ಥಿಗಳಾದ ಅಜಿತ್, ಕ್ಲಿವ್ ಜೇಮ್ಸ್, ರೋಶಿತ್ ರೋಹನ್, ಯಶ್ ರಾಜ್ ಉಪಕರಣ ತಯಾರಿಸುವಲ್ಲಿ ಸಹಕರಿಸಿದ್ದಾರೆ.

ಕಾರ್ಯಕ್ರಮದಲ್ಲಿ ವೈದ್ಯಕೀಯ ಅಧೀಕ್ಷಕ ಮೇಜರ್ ಡಾ. ಶಿವಕುಮಾರ್ ಹಿರೇಮಠ್, ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಲೂಂಕರ್, ಸಮಶೋಧನಾ ವಿಭಾಗದ ಡೀನ್ ಡಾ.ಸುದೇಶ್ ಬೇಕಲ್, ಮೆಕ್ಯಾನಿಕಲ್ ವಿಭಾಗ ಮುಖ್ಯಸ್ಥ ಡಾ.ಶಶಿಕಾಂತ್ ಕರಿಂಕ ಉಪಸ್ಥಿತರಿದ್ದರು.

Exit mobile version