ಮಂಗಳೂರು : ಕರ್ನಾಟಕ ಇಸ್ಲಾಮಿಕ ಸಾಹಿತ್ಯ ಅಕಾಡೆಮಿ ಉಪಾಧ್ಯಕ್ಷರು, ದಾರುಲ್ ಖುರ್‍ಆನ್ ಕಿಸಾ ಶರೀಅತ್ ಕಾಲೇಜಿನ ಉಪಾಧ್ಯಕ್ಷರು, ಸುನ್ನೀಸಂದೇಶ ಪತ್ರಿಕೆಯ ನಿರ್ದೇಶಕರು ಎ.ಎಚ್. ನೌಷಾದ್ ಹಾಜಿ ಸೂರಲ್ಪಾಡಿರವರ ಮಾವ ಸಮಾಜಸೇವಕರು ಬಿ.ಎಸ್. ಬಸ್, ಲಾರಿ ಮಾಲಕರಾಗಿದ್ದ ವಾದಿಸ್ಸಲಾಮ ಗಂಜಿಮಠ ಬಿ.ಎಸ್. ಮುಹಮ್ಮದ್ ಮೋನು (55)ರವರು 2 ಗಂಡು, 3 ಹೆಣ್ಣು ಹಾಗೂ ಪತ್ನಿ ಮತ್ತು ಅಪಾರ ಕುಟುಂಬಸ್ಥರನ್ನು ಅಗಲಿದ್ದಾರೆ.
ಮುಹಮ್ಮದ್ ಮೋನುರವರ ನಿಧನಕ್ಕೆ ಸುನ್ನೀಸಂದೇಶ ಪತ್ರಿಕೆಯ ಪ್ರಧಾನ ನಿರ್ದೇಶಕರಾದ ಪಾಣಕ್ಕಾಡ್ ಸಾದಿಕಲಿ ಶಿಹಾಬ್ ತಂಙಳ್, ಖಾಸಿಮ್ ಉಸ್ತಾದ್ ಕುಂಬಳೆ, ಹಾಜಿ ಕೆ.ಎಸ್. ಹೈದರ್ ದಾರಿಮಿ, ಮುಸ್ತಫ ಫೈಝಿ ಕಿನ್ಯ, ಎಂ.ಎ. ಅಬ್ದುಲ್ಲ ಹಾಜಿ ಬೆಳ್ಮ ರೆಂಜಾಡಿ, ಸಿತಾರ್ ಅಬ್ದುಲ್ ಮಜೀದ್ ಹಾಜಿ ಕಣ್ಣೂರು, ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ, ಉಮರ್ ದಾರಿಮಿ ಪಟ್ಟೋರಿ, ಸಿದ್ಧೀಖ್ ಫೈಝಿ ಕರಾಯ, ಇಬ್ರಾಹಿಂ ಕುಂಬಂಕುದಿ, ಮುನೀರ್ ದಾರಿಮಿ ಗೂನಡ್ಕ, ಬಶೀರ್ ಅಝ್‍ಹರಿ ಬಾಯಾರ್, ರಫೀಕ್ ಅಜ್ಜಾವರ, ಜಲೀಲ್ ಅಲ್‍ರಮಿ, ಸಾಹುಲ್ ಹಮೀದ್ ಐವರ್ನಾಡ್, ಹಸನ್ ಬೆಂಗರೆ ಹಾಗೂ ಸುನ್ನೀಸಂದೇಶ ಪತ್ರಿಕಾ ಬಳಗ ಹಾಗೂ ಕಿಸಾ ಕಾರ್ಯಕರ್ತರು ಸಂತಾಪ ಸೂಚಿಸಿ ಮಯ್ಯತ್ ನಮಾಝಿಗೆ ಮನವಿ ಮಾಡಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮುಸ್ತಫ ಫೈಝಿ ತಿಳಿಸಿದ್ದಾರೆ.