Site icon Ullalavani

ಇಮಾಮ್ ಶಾಫಿ ಅಕಾಡಮಿಯ ವಾಹನ ಪ್ರಚಾರ ಜಾಥಾಕ್ಕೆ ಉಳ್ಳಾಲದಿಂದ ಚಾಲನೆ

UN NETWORKS

ಮಂಗಳೂರು : ಕುಂಬಳೆ ಇಮಾಮ್ ಶಾಫಿ ಅಕಾಡಮಿಯ ದಶವಾರ್ಷಿಕ ಮಹಾಸಮ್ಮೇಳನ ಎಪ್ರಿಲ್ 9ರಿಂದ 15ರ ತನಕ ಕುಂಬಳೆ ಬದ್ರಿಯಾ ನಗರದಲ್ಲಿ ನಡೆಯಲಿದೆ.

ಇದರ ಪ್ರಚಾರಾರ್ಥ ಎಪ್ರಿಲ್ 1ರಿಂದ 9ರ ತನಕ ನಡೆಯುವ ಸಂದೇಶ ಯಾತ್ರೆಯು ಉಳ್ಳಾಲ ಸೈಯ್ಯಿದ್ ಮದನಿ ದರ್ಗಾ ಝಿಯಾರತ್‍ನೊಂದಿಗೆ ಸಮಸ್ತದ ಪತಾಕೆಯನ್ನು ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷರಾದ ಅಬ್ದುರ್ರಶೀದ್ ಹಾಜಿಯವರು ಸಂದೇಶ ಯಾತ್ರೆಯ ನಾಯಕರಾದ ಅನಸ್ ತಂಙಳ್ ಹಾಗೂ ಎಂ.ಪಿ. ಮುಹಮ್ಮದ್ ಸಅದಿರವರಿಗೆ ಪತಾಕೆ ನೀಡುವ ಮೂಲಕ ಪ್ರಚಾರ ಸಂದೇಶ ಜಾಥಾಕ್ಕೆ ಚಾಲನೆ ನೀಡಿದರು.

ಸಮಾರಂಭದಲ್ಲಿ ಉಳ್ಳಾಲ ಮಾಜಿ ಖತೀಬರಾದ ಅಬ್ದುರ್ರವೂಫ್ ಮುಸ್ಲಿಯಾರ್, ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಕೆ.ಎಲ್. ಉಮರ್ ದಾರಿಮಿ ಪಟ್ಟೋರಿ, ಉಳ್ಳಾಲ ಸಮಸ್ತ ನೇತಾರ ಇಬ್ರಾಹಿಂ ತಂಙಳ್, ಸುನ್ನೀಸಂದೇಶ ಪತ್ರಿಕೆಯ ಸಂಪಾದಕ ಮುಸ್ತಫ ಫೈಝಿ ಕಿನ್ಯ, ದಾರುಲ್ ಖುರ್‍ಆನ್ ಕಿಸಾ ಶರೀಅತ್ ಕಾಲೇಜಿನ ಪ್ರಧಾನ ಕಾರ್ಯದರ್ಶಿ ಸಿತಾರ್ ಅಬ್ದುಲ್ ಮಜೀದ್ ಹಾಜಿ, ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡೆಮಿಯ ಉಪಾಧ್ಯಕ್ಷ ಎಂ.ಎ. ಅಬ್ದುಲ್ಲ ಹಾಜಿ ಬೆಳ್ಮ ರೆಂಜಾಡಿ, ಗುರುಪುರ ರೇಂಜ್ ಅಧ್ಯಕ್ಷರಾದ ಅಬ್ದುಲ್ ಮಜೀದ್ ದಾರಿಮಿ, ಉಪ್ಪಿನಂಗಡಿ ರೇಂಜ್ ಮುಖಂಡ ಅಶ್ರಫ್ ಹನೀಫಿ ಕರಾಯ, ಮೂಸಾ ನಿಝಾಮಿ ಕುಂಬಳೆ, ಮಜೀದ್ ನಿಝಾಮಿ ದೇರಿಕಟ್ಟೆ, ಅಶ್ರಫ್ ಫೈಝಿ, ಮುಹಮ್ಮದ್ ಇರ್ಷಾದ್, ಅನ್ಸಾರ್ ಸಾಲ್ಮರ, ಇಷಾದ್ ಅಝ್‍ಹರಿ, ಹುಸೈನ್ ಫೈಝಿ, ಅಬ್ದುರ್ರಹ್ಮಾನ್ ಐತಮಿ, ಹಕೀಂ ಫೈಝಿ, ನಾಸಿರ್ ಶಾಫಿ, ಬಶೀರ್ ಶಾಫಿ, ಜಬ್ಬಾರ್ ಶಾಫಿ, ನವಾಝ್ ಶಾಫಿ, ಫಕ್ರುದ್ದೀನ್ ಹಾಜಿ ಮೊದಲಾದವರು ಉಪಸ್ಥಿತರಿದ್ದರು ಎಂದು ಪ್ರಕಟಣೆಯಲ್ಲಿ ಮುಸ್ತಫ ಫೈಝಿ ತಿಳಿಸಿದ್ದಾರೆ.

Exit mobile version