Site icon Ullalavani

ಏ.7 ಮಹಾ ಸಮ್ಮೇಳನದ ಅಂಗವಾಗಿ ಪ್ರಚಾರ ಸಂಗಮ

UN NETWORKS

ಮಲಪ್ಪುರಂ : ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ವಿದ್ಯಾಲಯವಾದ ಪಟ್ಟಿಕ್ಕಾಡ್ ಜಾಮಿಅ ನೂರಿಯ್ಯಾದಲ್ಲಿ ಏಪ್ರಿಲ್ ಏಳರಂದು ನಡೆಯಲಿರುವ ಐತಿಹಾಸಿಕ ಸಮಸ್ತ ಮಹಾ ಸಮ್ಮೇಳನದ ಪ್ರಚಾರ ಸಂಗಮ ಉಳ್ಳಾಲದಲ್ಲಿ ಇತ್ತೀಚೆಗೆ ನಡೆಯಿತು.

ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯರೂ , ಮಲಪ್ಪುರಂ ಜಿಲ್ಲಾ ಪ್ರಧಾನ ಕಾರ್ಯದರ್ಶಿಯೂ ಆದ ಶೈಖುನಾ ಕುಜ್ಞಾನಿ ಉಸ್ತಾದರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾಮಿಅ ನೂರಿಯ್ಯಾದ ಮುದರ್ರಿಸರಾದ ಶೈಖುನಾ ಕೋಟುಮಲ ಮುಹಿಯುದ್ದೀನ್ ಕುಟ್ಟಿ ಉಸ್ತಾದ್, ಉಸ್ತಾದ್ ಹಂಝ ಫೈಝಿ ಹೈತಮಿ , ಳಿಯಾವುದ್ದೀನ್ ಫೈಝಿ ಮೇಲ್ಮುರಿ , ಸುಲೈಮಾನ್ ಫೈಝಿ ಚುಂಗತ್ತರ, ಮುಹಮ್ಮದ್ ಶಿಹಾಬ್ ಫೈಝಿ ಕೂಮಣ್ಣ ಮುಂತಾದವರು ಉಪಸ್ಥಿತರಿದ್ದರು.

ಜಾಮಿಅ ನೂರಿಯ್ಯಾದಲ್ಲಿ ವಿದ್ಯಾರ್ಜನೆ ನಡೆಸುತ್ತಿರುವ ಕರ್ನಾಟಕದ ವಿದ್ಯಾರ್ಥಿಗಳು ಕಾರ್ಯಕ್ರಮನ್ನು ಆಯೋಜಿಸಿದರು.

Exit mobile version