Site icon Ullalavani

ಸೋಮೇಶ್ವರ: ಶ್ರೀ ಸೋಮನಾಥ ದೇವರಿಗೆ ಸೇವಾರೂಪದಲ್ಲಿ ಚಂದ್ರಮಂಡಲ ರಥ ಸಮರ್ಪಣೆ

UN NETWORKS

ಸೋಮೇಶ್ವರ: ಸೋಮೇಶ್ವರ ಮಾಗಣೆಯ ಶ್ರೀ ಸೋಮನಾಥ ದೇವರಿಗೆ ಗಾಣಿಗ ಸಮಾಜದಿಂದ ಸೇವಾರೂಪದಲ್ಲಿ ಚಂದ್ರಮಂಡಲ ರಥ ಸಮರ್ಪಣೆ ಕಾರ್ಯಕ್ರಮ ನಡೆಯಿತು.

ರಥ ಸಮರ್ಪಣೆಯ ಪೂರ್ವಭಾವಿಯಾಗಿ ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಧರ್ಮಅರಸರ ಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ, ತೊಕ್ಕೊಟ್ಟು ಜೈ ವೀರಮಾರುತಿ ವ್ಯಾಯಾಮ ಶಾಲೆಯಲ್ಲಿ ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ಧರ್ಮದರ್ಶಿ ಹಾಗೂ ದರ್ಶನ ಪಾತ್ರಿ ದೇವು ಮೂಲ್ಯಣ್ಣ ಇವರು ಗಣ್ಯರ ಉಪಸ್ಥಿತಿಯಲ್ಲಿ ಚಂದ್ರ ಮಂಡಲ ರಥದ ವೈಭವದ ಶೋಭಾಯಾತ್ರೆಗೆ ಚಾಲನೆ ನೀಡಿದರು.

ಜಾಹೀರಾತು

ಶೋಭಾಯಾತ್ರೆಯು ವ್ಯಾಯಾಮ ಶಾಲೆಯಿಂದ ಕೊಲ್ಯ, ಕೋಟೆಕಾರು, ಬೀರಿ ಮಾರ್ಗವಾಗಿ ಸೋಮೇಶ್ವರ ಶ್ರೀ ಸೋಮನಾಥ ದೇವರ ಸನ್ನಿಧಿಯಲ್ಲಿ ಸಮಪನ್ನಗೊಂಡಿತು.

Exit mobile version