UN NETWORKS
ಉಳ್ಳಾಲ: ಜಿಲ್ಲೆಯಲ್ಲಿ ಹಲವು ಹಲವು ವೈದ್ಯಕೀಯ ವಿದ್ಯಾಲಯ ಹಾಗೂ ಆಸ್ಪತ್ರೆಗಳು ಇದ್ದರೂ ಜನರು ಇದನ್ನು ಪಡೆಯುವಲ್ಲಿ ವಿಫಲರಾಗಿರುತ್ತಾರೆ.ಆತ್ಮಶಕ್ತಿ ವಿವಿದೋದ್ದೇಶ ಸಹಕಾರ ಸಂಘದಂತಹ ಸಂಸ್ಥೆಗಳು ಶಿಬಿರಗಳನ್ನು ಏರ್ಪಡಿಸಿದಾಗ ಗ್ರಾಮೀಣ ಪ್ರದೇಶದ ಜನರು ಉಪಯೋಗ ಪಡೆದಕೊಳ್ಳಲು ಸಾಧ್ಯ ಎಂದು ಕೆ.ಎಸ್.ಹೆಗ್ಡೆ ಮೆಡಿಕಲ್ ಆಸ್ಪತ್ರೆ ಇದರ ಅರಿವಳಿಕೆ ವಿಭಾಗದ ಮುಖ್ಯಸ್ಥ ಡಾ| ಆನಂದ್ ಬಂಗೇರ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ವಹಿಸಿ ನಮ್ಮ ಸಹಕಾರಿ ಸಂಘವು ನಿರಂತರವಾಗಿ ಪ್ರತಿಯೊಂದು ಶಾಖೆಯಲ್ಲಿ ತನ್ನ ವಾರ್ಷಿಕೋತ್ಸವ ಸಮಾರಂಭ ಆಚರಿಸಿಕೊಂಡು ಬರುತ್ತಿದ್ದು ಇದರಿಂದ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಪ್ರಯೋಜನ ದೊರಕಿದೆ. ಈ ಕಾರ್ಯಕ್ರಮದಲ್ಲಿ ಉಚಿತ ಔಷಧ ಹಾಗೂ ಕನ್ನಡಕ ವಿತರಿಸುತ್ತಿದ್ದು ಹೆಚ್ಚಿನ ಅಗತ್ಯವಿದ್ದಾಗ ಸ್ಥಳೀಯ ಸಹಕಾರ ಸಂಸ್ಥೆಗಳ ಸಹಯೋಗದೊಂದಿಗೆ ಉಚಿತವಾಗಿ ನೀಡಿದ ಹೆಮ್ಮೆ ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘದ್ದು. ಈ ಸಂಧರ್ಭದಲ್ಲಿ ಕನ್ನಡಕ ವಿತರಣೆಗೆ ಸಹಾಯ ಹಸ್ತ ಮಾಡಿದ ಬಿ.ಡಿ.ಗೋಪಾಲ್ ಇವರ ಸಹಕಾರ ಸ್ಮರಣೀಯ ಎಂದರು.
ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘದ ನಿರ್ದೇಶಕ ವಾಮನ್ ಕೆ., ಬಂಡಿಕೊಟ್ಯ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಜಗದೀಶ್ ಗೋಳಿಯಾಡಿ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ದೇವಕಿ ಆರ್.ಉಳ್ಳಾಲ್, ವಿದ್ಯಾರಣ್ಯ ಯುವಕ ವೃಂದ ಮತ್ತು ವಿದ್ಯಾರಣ್ಯ ಕಲಾವೃಂದ ಅಧ್ಯಕ್ಷ ಚೂಡಪ್ಪ ಉಳ್ಳಾಲ್ ಮಾಜಿ ಅಧ್ಯಕ್ಷ ರವೀಂದ್ರರಾಜ್ , ಶಿವಶಕ್ತಿ ಯುವಕ ಮಂಡಲ ಉಳ್ಳಾಲ ಅಧ್ಯಕ್ಷ ಸತೀಶ್ ಹಾಗೂ ಯೇನೆಪೊ್ಯ ಆಸ್ಪತ್ರೆಯ ವೈದ್ಯ ಡಾ|ಸಂಕೇತ್, ಸಂಪರ್ಕಾಧಿಕಾರಿ ಭರತ್, ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘದ ನಿರ್ದೇಶಕರುಗಳಾದ ರಾಮ್‍ದಾಸ್ ಮರೋಳಿ, ಆನಂದ ಎಸ್ ಕೊಂಡಾಣ, ಚಂದ್ರಹಾಸ್ ಮರೋಳಿ, ರಮಾನಾಥ ಸನಿಲ್, ಸುಜಯ ಹೇಮಚಂದ್ರ ಹಾಗೂ ಮುಖ್ಯಕಾರ್ಯನಿರ್ವಹಣಾ„ಕಾರಿ ಸೌಮ್ಯ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸುಮಾರು 200 ಕ್ಕೂ ಮಿಕ್ಕಿ ಶಿಬಿರಾರ್ಥಿಗಖಿಗೆ ರೋಗ ತಪಾಸಣೆ ಹಾಗೂ ದಂತ ಚಿಕಿತ್ಸೆ ಉಚಿತ ಔಷಧ ವಿತರಣೆ ಮಾಡಲಾಯಿತು ಹಾಗೂ ಕಣ್ಣಿನ ತಪಾಸಣೆಯಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಉಚಿತ ಕನ್ನಡಕವನ್ನು ವಿತರಿಸಲಾಯಿತು.
ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದ ಅಧ್ಯಕ್ಷ ಜಗದೀಶ್ ಗೋಳಿಯಾಡಿ ಸ್ವಾಗತಿಸಿದರು.
ಆತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷ ನೇಮಿರಾಜ್ ಪಿ. ವಂದಿಸಿದರು.ಸಂಘದ ಶಾಖಾಧಿಕಾರಿ ಹರಿಣಾಕ್ಷಿ ಕಾರ್ಯಕ್ರಮ ನಿರೂಪಿಸಿದರು.