UN NETWORKS
ಉಳ್ಳಾಲ: ಸಮಾಜದ ಬಂಧುಗಳು ಸಂಘಟಿತರಾಗಿ ಕಾರ್ಯ ನಿರ್ವಹಿಸಿದರೆ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಕಾಸರಗೋಡು ಬ್ರಹ್ಮಶ್ರೀ ಪುರೋಹಿತ ರತ್ನ ಬಿ. ಕೇಶವ ಆಚಾರ್ಯ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿ.ಪಿ.ರೂಪೇಶ್ ಭಟ್ನಗರ ಅವರು ವಹಿಸಿದ್ದರು. ಆಹಾರ ಮತ್ತು ನಾಗರಿಕ ಸಚಿವರಾದ ಯು.ಟಿ.ಖಾದರ್, ದೇಶೀಯ ಅಧ್ಯಕ್ಷ ರವಿ ಚೇರ್ಪೆ,ಎನ್. ವಿ.ಎಫ್. ದೇಶೀಯ ಉಪಾಧ್ಯಕ್ಷರಾದ ಸೀತಾರಾಮ ಆಚಾರ್ಯ , ಉತ್ತರ ಕರ್ನಾಟಕ ವಲಯದ ರಾಜ್ಯಾಧ್ಯಕ್ಷ ವೆಂಕಟೇಶ್ ಅನ್ವರಿ, ಎನ್.ವಿ.ಎಫ್. ರಾಜ್ಯ ಸಮಿತಿ ಉಪಾಧ್ಯಕ್ಷ ವಿ.ಉಪೇಂದ್ರ ಆಚಾರಿ ವಯಲಾಂಕುಳಿ ,ಹಾಗೂ ಎನ್.ವಿ.ಎಫ್.ರಾಜ್ಯ ವನಿತಾ ಸಮಿತಿ ಅಧ್ಯಕ್ಷೆ ವಂಸತಿ ಜನಾರ್ದನ ಆಚಾರ್ಯ, ಮಹಿಳಾ ಅಧ್ಯಕ್ಷೆ ಶರ್ಮಿಳಾ ಮಹೇಶ್, ಸದಸ್ಯ ನಂದಕಿಶೋರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೃಷ್ಣನ್ ಕೆ ಕುಂಪಲ, ಟಿ.ವಿ.ಕುಂಞರಾಮನ್ ದಡ್ಡಲ್‍ಕಾಡ್ ಹಾಗೂ ಅನಿಲ್ ಕುಮಾರ್ ಮನಿಯಂಪಾರೆ ಅವರನ್ನು ಸನ್ಮಾನಿಸಲಾಯಿತು
ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ. ಆರ್.ರಾಜನ್ ಸ್ವಾಗತಿಸಿದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರ್ವಹಿಸಿದರು. ಸಮಿತಿಯ ಉಪಾಧ್ಯಕ್ಷ ಕೇಶವ ಆಚಾರ್ಯ ವಂದಿಸಿದರು.