Site icon Ullalavani

ಬೂತ್ ಪ್ರಮುಖರ ಶಕ್ತಿಯಿಂದ ಪಕ್ಷಕ್ಕೆ ಗೆಲುವು: ಗೋಪಾಲ ಶೆಟ್ಟಿ

UN NETWORKS

ಉಳ್ಳಾಲ: ಬೂತ್ ಮಟ್ಟದ ಪ್ರಮುಖರ ಶಕ್ತಿ, ಒಗ್ಗಟ್ಟಿನಿಂದ ಪಕ್ಷ ಬಲ ಹೆಚ್ಚಾಗಿ ಚುನಾವಣೆಗಳಲ್ಲಿ ಅಭ್ಯರ್ಥಿ ಜಯ ಗಳಿಸಲು ಸಾಧ್ಯ ಎಂದು ಮಹರಾಷ್ಟ್ರ ಸಂಸದ ಗೋಪಾಲ ಶೆಟ್ಟಿ ಅಭಿಪ್ರಾಯಪಟ್ಟರು.

ಭಾನುವಾರ ಕೊಲ್ಯ ಸೌಭಾಗ್ಯ ಸಭಾ ಭವನದಲ್ಲಿ ನಡೆದ ಮಂಗಳೂರು ಕ್ಷೇತ್ರ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.
ಕಳೆದ ಬಾರಿ ಹಲವು ಕ್ಷೇತ್ರಗಳಲ್ಲಿ ಅಲ್ಪ ಮತಗಳಿಂದ ಪಕ್ಷದ ಅಭ್ಯರ್ಥಿಗಳು ಸೋತಿದ್ದಾರೆ. ಪುತ್ತೂರಿನಲ್ಲಿ 200 ಮತಗಳಿಂದ ಪಕ್ಷ ಸೋಲು ಕಂಡಿದೆ. ಅಂತಹ ಕ್ಷೇತ್ರಗಳಲ್ಲಿ ಈ ಬಾರಿ ಗೆಲುವು ಸಾಧಿಸುವುದು ಕಷ್ಟವಲ್ಲ. ಹಿಂದು, ಮುಸ್ಲಿಮರು ಬಿಜೆಪಿಗೆ ಮತ ಹಾಕುವುದಿಲ್ಲ ಎನ್ನುವ ಭಾವನೆ ಲೋಕಸಭಾ ಚುನಾವಣೆಯ ಫಲಿತಾಂಶ ಸುಳ್ಳಾಗಿಸಿದೆ ಎಂದು ಹೇಳಿದರು.

ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ ಉಳ್ಳಾಲ್, ಕಾರ್ಯದರ್ಶಿ ನಮಿತಾ ಶ್ಯಾಂ, ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ, ಕ್ಷೇತ್ರ ಪ್ರಭಾರಿ ಉಮಾನಾಥ ಕೋಟ್ಯಾನ್, ಚುನಾವಣಾ ಸಂಯೋಜಕ ಹರಿಶ್ಚಂದ್ರ, ಮಾಜಿ ವಿದಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ನಿತಿನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಜಾಹೀರಾತು

ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೋಹನ್‍ರಾಜ್ ಸ್ವಾಗತಿಸಿದು. ಉಪಾಧ್ಯಕ್ಷ ಯಶವಂತ ಅಮೀನ್ ಕಾರ್ಯಕ್ರಮ ನಿರೂಪಿಸಿದರು.

`ಕರ್ನಾಟದ ಜನರು ರಾಜಕೀಯವನ್ನು ಚೆನ್ನಾಗಿ ತಿಳಿದಿರುವ ಕಾರಣ ಇಲ್ಲಿ ಭಾಷಣಗಳ ಅವಶ್ಯಕತೆಯಿಲ್ಲ ಎನ್ನುವ ಸೂಚನೆ ಅಮಿತ್ ಷಾ ನೀಡಿದ್ದಾರೆ, ಚುನಾವಣೆಗೆ ಕೆಲವೇ ಸಮಯ ಇರುವುದರಿಂದ ಮುಂದಿನ ಕ್ರಮಗಳ ಬಗ್ಗೆ ನಿರಂತರ ಸಭೆ ನಡೆಸಿ ಚರ್ಚಿಸುವುದು ಹಾಗೂ ತಟಸ್ಥ ಮತಗಳನ್ನು ಸೆಳೆಯುವ ಬಗ್ಗೆ ಚಿಂತಿಸುವುದು ಮುಖ್ಯ’
ಗೋಪಾಲ ಶೆಟ್ಟಿ, ಮಹಾರಾಷ್ಟ್ರ ಸಂಸದ

Exit mobile version