Site icon Ullalavani

ಉಳ್ಳಾಲ: ಮೀನು ಸಾಗಾಟದ ಲಾರಿಯಲ್ಲಿ ಅಕ್ರಮ ಮರಳು ಸಾಗಾಟ

UN NETWORKS

ಉಳ್ಳಾಲ: ಮೀನು ಸಾಗಾಟದ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದ ಜಾಲವನ್ನು ಉಳ್ಳಾಲ ಪೊಲೀಸರು ಕೇರಳ ಗಡಿಭಾಗ ತಲಪಾಡಿ ಹೊಯ್ಗೆಹಿತ್ಲು ಎಂಬಲ್ಲಿಂದ ಶುಕ್ರವಾರ ತಡರಾತ್ರಿ ಪತ್ತೆಹಚ್ಚಿದ್ದು, ಸ್ಥಳದಲ್ಲಿದ್ದ ಕಂಟೈನರ್ ಲಾರಿ, ಟಿಪ್ಪರ್ ಲಾರಿ ಮತ್ತು ನಾಲ್ಕು ಯುನಿಟ್ ಹೊಯ್ಗೆ ಒಟ್ಟು 15 ಲಕ್ಷ ಬೆಲೆಬಾಳುವ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕೇರಳ ರಾಜ್ಯಕ್ಕೆ ಅಕ್ರಮವಾಗಿ ಮರಳು ಸಾಗಾಟ ನಡೆಸುವ ಉದ್ದೇಶದಿಂದ ಟಿಪ್ಪರ್ ಲಾರಿ ಮೂಲಕ ಉಳ್ಳಾಲ ವ್ಯಾಪ್ತಿಯ ವಿವಿಧ ನದಿ ತೀರದ ದಡದಿಂದ ಮರಳು ತಂದು, ತಲಪಾಡಿ ಸಮೀಪ ದಾಸ್ತಾನಿರಿಸುತ್ತಿದ್ದರು. ಅಲ್ಲಿಂದ ಹಸಿ ಮೀನು ಸಾಗಾಟ ನಡೆಸುವ ಲಾರಿಯೊಳಗೆ ಪ್ಲಾಸ್ಟಿಕ್ ಟ್ರೇ ಬಳಸಿ, ಅದರಲ್ಲಿ ಮರಳು ತುಂಬಿಸಿ ಸಾಗಾಟ ನಡೆಸುತ್ತಿದ್ದರು. ಶುಕ್ರವಾರ ಉಳ್ಳಾಲ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಜಾಲ ಪತ್ತೆಯಾಗಿದೆ. ಪೊಲೀಸ್ ದಾಳಿ ವೇಳೆ ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಜಾಹೀರಾತು

ಪೊಲೀಸ್ ಕಮೀಷನರ್ ಟಿ.ಆರ್. ಸುರೇಶ್ ಅವರ ನಿರ್ದೇಶನದಂತೆ ಡಿಸಿಪಿ ಹನುಮಂತರಾಯ, ಉಮಾಪ್ರಶಾಂತ್ ಮಾರ್ಗದರ್ಶನದಂತೆ ಎಸಿಪಿ ಕೆ.ರಾಮರಾವ್ ನಿರ್ದೇಶನದಲ್ಲಿ ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ ಕೆ.ಆರ್ ಮತ್ತು ಎಎಸ್ ಐ ಮಂಜಪ್ಪ ಸಿಬ್ಬಂದಿ ಲಿಂಗರಾಜ್, ರಂಜಿತ್, ಪ್ರಶಾಂತ್, ಪೂರ್ವಾಚಾರ್ ನೇತೃತ್ವದ ತಂಡ ದಾಳಿ ನಡೆಸಿ ವಶಪಡಿಸಿಕೊಂಡಿದೆ.

Exit mobile version