Site icon Ullalavani

ಅಲ್ ಇಹ್ಸಾನ್ ಯೂತ್ ಅಸೋಸಿಯೆಶನ್ ಅಧ್ಯಕ್ಷರಾಗಿ ಎಂ.ಸಿರಾಜ್ ಅಡ್ಕರೆ ಅವಿರೋಧ ಆಯ್ಕೆ

UN NETWORKS

ಉಳ್ಳಾಲ: ಅಲ್ ಇಹ್ಸಾನ್ ಯೂತ್ ಅಸೋಸಿಯೇಶನ್ ಅಡ್ಕರೆ ಪಡ್ಪು ಇದರ ಮಹಾಸಭೆ ಅಲ್ ಇಹ್ಸಾನ್ ಗಲ್ಪ್ ಘಟಕದ ಅಧ್ಯಕ್ಷರಾದ ರಹೀಮ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು, ಮುಖ್ಯ ಅತಿಥಿಗಳಾಗಿ ಮುಹಿಯುದ್ದೀನ್ ಜುಮಾ ಮಸೀದಿ ಇದರ ಖತೀಬರಾದ ಬಹು ಸುಲೈಮಾನ್ ಸಖಾಫಿ ಅಲ್ ಅಝ್ಹರಿ ಸಭೆಯನ್ನು ದುವಾ ನೆರವೇರಿಸುವುದರ ಮೂಲಕ ಚಾಲನೆ ನೀಡಿದರು.

ಸಭೆಯಲ್ಲಿ ನೂತನ ಪಧಾದಿಕಾರಿಗಳ ಆಯ್ಕೆ ನಡೆಯಿತು, ನೂತನ ಅಧ್ಯಕ್ಷರಾಗಿ ಎಂ.ಸಿರಾಜ್ ಅಡ್ಕರೆ ಅವಿರೋಧವಾಗಿ ಆಯ್ಕೆಯಾದರು, ಪ್ರಸ್ತುತ ಇವರು ತುಳುನಾಡ ರಕ್ಷಣಾ ವೇದಿಕೆಯ ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾಗಿ, ಅಡ್ಕರೆ ಫೌಂಡೇಶನ್ ಇದರ ಅಧ್ಯಕ್ಷರಾಗಿ, ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಜಾಹೀರಾತು

ಗೌರವ ಅಧ್ಯಕ್ಷರಾಗಿ ಅಬೂಬಕ್ಕರ್, ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್, ನಿಯಾಝ್, ಪಾರೂಖ್ ಪಿ.ಸಿ, ಮುಸ್ತಫಾ, ಪ್ರಧಾನ ಕಾರ್ಯದರ್ಶಿಯಾಗಿ ಮುಸ್ತಫಾ ಬೆಳ್ಮ , ಜೊತೆ ಕಾರ್ಯದರ್ಶಿಯಾಗಿ ಸಿದ್ಧೀಕ್ ಬಿ.ಪಿ., ಉಸ್ಮಾನ್‍ಬಿ.ಎಂ, ಹನೀಫ್ ಕಟ್ಟೆಮನೆ, ಕೋಶಾಧಿಕಾರಿಯಾಗಿ ಅಶ್ರಫ್ ಬಿ.ಎಂ., ಪತ್ರಿಕಾ ಕಾರ್ಯದರ್ಶಿಯಾಗಿ ತಯ್ಯುಬ್ ಮುಲಾರ, ಸಂಘಟನಾ ಕಾರ್ಯದರ್ಶಿಯಾಗಿ ಬದ್ರುದ್ದೀನ್, ನಝೀರ್, ಸಲಾಂ, ಯೂಸುಫ್ ಆಯ್ಕಯಾದರು.

Exit mobile version