ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಉಳ್ಳಾಲ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ 402, ಉಳ್ಳಾಲ ಬಹುಮಾನ್ಯರಾದ ಖುತ್ಬುಝ್ಝುಮಾನ್ ಹಝ್ರತ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ(ಖ.ಸಿ) ತಂಙಳ್‍ರವರ 423ನೆಯ ವಾರ್ಷಿಕ ಹಾಗೂ 20ನೇ ಪಂಚವಾರ್ಷಿಕ ಉರೂಸ್ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ಹಾಗೂ ನವೀಕೃತ ಮಸೀದಿಯ ಉದ್ಘಾಟನೆ ಸಮಾರಂಭ ಉಳ್ಳಾಲ ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಮದನಿ ಅಲ್‍ಬುಖಾರಿ ಅವರ ನೇತೃತ್ವದಲ್ಲಿ ಗುರುವಾರ ನಡೆಯಿತು.
ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಯು.ಎಸ್.ಹಂಝ ಅವರು ಮಾತನಾಡಿ ಈಗಾಗಲೇ ನವೀಕೃತ ಜುಮಾ ಮಸೀದಿ ಉದ್ಘಾಟನೆಗೊಂಡಿದೆ. ಉಳ್ಳಾಲ ಉರೂಸ್ ಯಶಸ್ವಿಗೆ ಸುಮಾರು 2500 ಸ್ವಯಂ ಸೇವಕರನ್ನೊಳಗೊಂಡ ಹಲವು ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡಕ್ಕೂ ಜವಬ್ದಾರಿ ವಹಿಸಲಾಗಿದೆ.
ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ, ಮಾಧ್ಯಮ ಸೇರಿದಂತೆ ಎಲ್ಲರ ಸಹಕಾರ ಅಗತ್ಯ ಎಂದರು.
ಉಳ್ಳಾಲ ಉರೂಸ್‍ಗೆ ಸರ್ವಧರ್ಮೀಯರು ಸೇರಲಿದ್ದು ಸುಮಾರು 25 ರಿಂದ 30 ಲಕ್ಷ ಜನರು ಆಗಮಿಸುತ್ತಾರೆ. ಎಲ್ಲರಿಗೂ ಅಲ್ಲಾಹುವಿನ ಅನುಗ್ರಹ ಸಿಗಲಿ. ಕಾರ್ಯಕ್ರಮಕ್ಕೆ ಎಲ್ಲರನ್ನು ಆಹ್ವಾನಿಸುತ್ತಾ ಇದ್ದೇನೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಮಾತನಾಡಿ ಉಳ್ಳಾಲ ಉರೂಸ್‍ಗೆ ದೇಶ ವಿದೇಶದಿಂದ ಲಕ್ಷಾಂತರ ಜನರು ಪಾಲ್ಗೊಳ್ಳುತ್ತಾರೆ. ದಕ್ಷಿಣ ಅಜ್ಮೀರ್ ಖ್ಯಾತಿಯ ಉಳ್ಳಾಲ ಉರೂಸ್‍ನ್ನು ಹಿರಿಯರು ನಿಷ್ಠೆಯಿಂದ ನಡೆಸಿಕೊಂಡು ಬರುತ್ತಿದ್ದು, ಅದೇ ಪ್ರಕಾರ ಮುನ್ನಡೆಸಿಕೊಂಡು ಹೋಗಲಾಗುತ್ತಿದೆ. ಶಾಂತಿ ಸೌಹಾರ್ದತೆಯ ಪ್ರತೀಕವಾಗಿರುವ ಉಳ್ಳಾಲ ಉರೂಸ್ ನಾಡಿಗೆ ಶಾಂತಿ ಸೌಹಾರ್ದ ಬಿತ್ತಲಿದೆ ಎಂದರು.
ಐದು ವರುಷಗಳಿಗೊಮ್ಮೆ ನಡೆಯತ್ತಾ ಬಂದಿರುವ ಉರೂಸ್ ಸ್ವಾಭಿಮಾನ ಹಾಗೂ ಗೌರವದ ಕಾರ್ಯಕ್ರಮ. ಹಿಂದಿನ ಸಂಸ್ಕ ೃತಿಯನ್ನು ಯುವ ಪೀಳಿಗೆ ಮುಂದುವರಿಸಿಕೊಂಡು ಹೋಗುತ್ತಿದೆ. ಜನಸಾಮಾನ್ಯರು ಆಗಮಿಸುವ ಸಂದರ್ಭದಲ್ಲಿ ಇಲ್ಲಿ ಅವರಿಗೆ ಎಲ್ಲ ರೀತಿಯ ಸಹಕಾರ ಸಿಗಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಂಸದರು, ಸಚಿವರು ಸೇರಿದಂತೆ ಧಾರ್ಮಿಕ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪ್ರಮುಖರು ಆಗಮಿಸಿಲಿದ್ದಾರೆ. ಉಳ್ಳಾಲ ಮುಖ್ಯ ರಸ್ತೆಯ ಪ್ರಥಮ ಹಂತದ ಕಾಮಗಾರಿ ಈಗಾಗಲೇ ಮುಗಿದಿದೆ. ಇದೇ ವಾರದಲ್ಲಿ ಉದ್ಘಾಟನೆ ನಡೆಯಲಿದೆ ನುಡಿದರು.
ಕಾರ್ಯಕ್ರಮದಲ್ಲಿ ಉಳ್ಳಾಲ ಸಯ್ಯಿದ್ ಮದನಿ ಅರಬಿಕ್ ಕಾಲೇಜಿನ ಪ್ರೊಪೆಸರ್ ಅಸ್ಸಯ್ಯಿದ್ ಅಬೂಬಕ್ಕರ್ ಚೆರುಕುಂಞ ತಂಙಳ್, ಪ್ರೊಪೆಸರ್ ಅಬ್ದುರ್ರಶೀದ್ ಮದನಿ, ಪ್ರೊಪೆಸರ್ ಅಹ್ಮದ್ ಬಾವ ಮುಸ್ಲಿಯಾರ್, ಕೇಂದ್ರ ಜುಮಾ ಮಸೀದಿ ಖತೀಬ ಅಬ್ದಲ್ ರವೂಫ್ ಮುಸ್ಲಿಯಾರ್, ದರ್ಗಾ ಸಮಿತಿ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ ವೇ, ಪ್ರಧಾನ ಕಾರ್ಯದರ್ಶಿ ಯು.ಟಿ.ಇಲ್ಯಾಸ್, ಕೋಶಾಧಿಕಾರಿ ಮಹಮ್ಮದ್ ಹಾಜಿ ಬಿಲಾಲ್, ಲೆಕ್ಕ ಪರಿಶೋಧಕ ಹಮೀದ್ ಕಲ್ಲಾಪು, ಉಪಕಾರ್ಯದರ್ಶಿಗಳಾದ ಅಶ್ರಫ್ ಹಾಜಿ ಹಾಗೂ ಫಾರೂಕ್ ಮಾರ್ಗತ್ತಲೆ ಹಾಗೂ ಉರೂಸ್ ಸಮಿತಿಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು.
ಉರೂಸ್ ಪ್ರಯುಕ್ತ ನಿತ್ಯವೂ ಮಗ್ರಿಬ್ ನಮಾಝಿನ ನಂತರ ಉಲಮಾ ಶಿರೋಮಣಿಗಳಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ.