Site icon Ullalavani

ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ನೂತನ ಸಾರಥಿಗಳು

UN NETWORKS

ಕುವೈತ್: ಕೊಲ್ಲಿ ರಾಷ್ಟ್ರಗಳಲ್ಲಿ ಬಳ್ಳಿ ಬಳ್ಳಿಯಾಗಿ ಹರಡಿದೆ ಕೆಸಿಎಫ್. ಗಲ್ಫ್ ರಾಷ್ಟ್ರಗಳಲ್ಲಿ ಒಂಟಿಯಾಗಿ ಚಿಂತಿಸುವ ದುಃಖದ ಹೃದಯಕ್ಕೆ ಸಾಂತ್ವಾನವಾಗಿ ಜವಾಬ್ದಾರಿಯುತ ಕುಟುಂಬಕ್ಕೆ ಹೆಗಲಾಗಿ ಪೊನಿನ ಮೂಲಕ ಮಾತ್ರ ಆನಂದಿಸುವ ಕ್ಷಣಕ್ಕಾಗಿ ಪರಿತಪಿಸುವ ಪ್ರವಾಸಿ ತನ್ನ ನಗುವಿನ ಹಿಂದೆ ಬತ್ತಿದ ಕಣ್ನೀರು,ಹಲವಾರು ಕನಸಿನೊಂದಿಗೆ ಜೀವಿಸುವ ಜೀವಕ್ಕೆ ಜೀವ ನೀಡಿದ ಕೆಸಿಎಫ್ ಕುಟುಂಬದವರ ನೆನಪುಗಳೊಂದಿಗೆ ನಾಲ್ಕು ಗೋಡೆಗಳ ಮಧ್ಯೆ ಸಾಲದ ಹೊರೆ ಹೊತ್ತು ಮಲಗಿ ಕಾಲ ಕಳೆಯುವ ನಮಗೆ ಉಡುಗೊರೆಯಾಗಿ ಸಿಕ್ಕಿದ ಕೆಸಿಎಫ್ ಕಮರಿ ಹೋದ ಮನಸ್ಸಿಗೆ ಸಾಂತ್ವಾನ ನೀಡಿದ ಕೆಸಿಎಫ್ ಇದೀಗ ನಮ್ಮ ದೇಹದ ನರ ನಾಡಿಯಲ್ಲೂ ಸುನ್ನಿ ಆಶಯವನ್ನು ಬಿತ್ತಿದೆ.ಸಿಹಿಯಾದ ಮೂರು ಅಕ್ಷರಗಳಲ್ಲಿ ಅಮೃತ ಧಾರೆಯಾಗಿ ಮನಸ್ಸಿಗೆ ಮುದ ನೀಡುವ,ಕಮರಿ ಹೋದ ಕನಸ್ಸುಗಳಿಗೆ ಧಾರ್ಮಿಕ ಬೋಧನೆ ನೀಡಿದ ಅಸ್ಸುಫಾ ತರಗತಿ.ಗತ ವೈಭವದ ಮಹಾತ್ಮರ,ಉಲಮಾ ನಾಯಕರ ಬಂಧ ಇರುವ ಕೆಸಿಎಫ್ ಕುವೈತ್ ನಲ್ಲಿ ಇತಿಹಾಸ ನಿರ್ಮಿಸಿದೆ.

ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ವಾರ್ಷಿಕ ಮಹಾಸಭೆಯು ದಿನಾಂಕ 23/03/2018 ಶುಕ್ರವಾರ ಅಸರ್ ನಮಾಝ್ ನ ನಂತರ ಕುವೈತ್ ಹೃದಯ ಭಾಗದ ಮುರ್ಗಾಫ್ ಸಿಟಿಯ ಹೋಟೆಲ್ ಪ್ಯಾರಗಾನ್ ನ ಸಭಾಂಗಣದಲ್ಲಿ ಬಹುಮಾನ್ಯ ಸೈಯದ್ ಹಾಮಿದ್ ಅನ್ವರ್ ಅಹ್ದಲಿ ತಂಙಳ್ ಮುಹಿಮಾತ್ ರವರ ನೇತ್ರತ್ವದಲ್ಲಿ, ಬಹುಮಾನ್ಯ ಬಾದುಷ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ,ಬಹುಮಾನ್ಯ ಉಮರುಲ್ ಪಾರೂಕ್ ಉಸ್ತಾದರ ಉದ್ಘಾಟನೆಯೊಂದಿಗೆ ಆರಂಭವಾಯಿತು.ತನ್ನ ಉದ್ಘಾಟನಾ ಭಾಷಣದಲ್ಲಿ ಸಂಘಟನೆಯ ಜವಾಬ್ದಾರಿ ನಾಯಕರಾದ ನಾವು ಮಾಡುವ ಕೆಲಸವು ಪರಲೋಕ ಜೀವನಕ್ಕಾಗಿ ಎಂದು ಬಾವಿಸಿ ಒಂದೇ ಕುಟುಂಬದಂತೆ ಕೆಲಸಮಾಡಬೇಕು ಎಂದು ತಿಳಿಸಿದರು. ಜನಾಬ್ ತಮೀಮ್ ಮಲಾರ್ ಕಿರಾತ್ ಪಠಿಸಿದರು. ರಾಷ್ಟ್ರೀಯ ಸಂಘಟನಾ ಕನ್ವೀನರ್ ಜನಾಬ್ ಝಕ್ರಿಯಾ ಆನೆಕಲ್ ಸ್ವಾಗತ ಕೋರಿದರು.

ಪ್ರಧಾನ ಕಾರ್ಯದರ್ಶಿಯಾಗಿ ಜನಾಬ್ ಯಾಕೂಬ್ ಕಾರ್ಕಳ ವರದಿಯನ್ನು ವಾಚಿಸಿದರು. ಹಾಗೂ ಕೆಸಿಎಫ್ ಕುವೈತ್ ಸದಸ್ಯರಿಗೆ ಸಹಕಾರವಾಗುವ ಮುಂದಿನ ಯೋಜನೆಯ ಬಗ್ಗೆ ತಿಳಿಸಿದರು. ವರುಷಕ್ಕೆ ಒಂದು ಬಾರಿ ಪ್ರತಿ ಸೆಕ್ಟರ್ ನಿಂದ ಒಬ್ಬ ಬಡ ಸದಸ್ಯನಿಗೆ ಉಚಿತವಾಗಿ ಉಮ್ರಾಕ್ಕೆ ಕಳಿಸುವ ಯೋಜನೆ ಯ ಬಗ್ಗೆ ತಿಳಿಸಿದರು. ಕೋಶಾಧಿಕಾರಿ ಜನಾಬ್ ಮೂಸ ಇಬ್ರಾಹಿಮ್ ಲೆಕ್ಕ ಪತ್ರ ಮಂಡಿಸಿದರು.

ಕುವೈತ್ ನಲ್ಲಿ ಪ್ರಥಮವಾಗಿ ಕೆಸಿಎಫ್ ಸದಸ್ಯರ ಗುರುತು ಚೀಟಿಯನ್ನು ಬಹುಮಾನ್ಯ ಸೈಯದ್ ಹಾಮಿದ್ ಅನ್ವರ್ ಅಹ್ದಲಿ ತಂಙಳ್ ರವರು ಕೆಸಿಎಫ್ ರಾಷ್ಟ್ರೀಯ ಸಾಂತ್ವಾನ ಚೆಯರ್ಮ್ಯಾನ್ ಜನಾಬ್ ಅಬ್ದುಲ್ ಲತೀಫ್ ಬಂಟ್ವಾಳ ರವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ತಂಙಳ್ ರವರು ಕೆಸಿಎಫ್ ನ ಸಕ್ರಿಯ ಕಾರ್ಯಕರ್ತರು ಮೊದಲನೆಯದಾಗಿ ಸಂಘಟನೆಯಲ್ಲಿ ಸಮಯ ಪಾಲನೆಯನ್ನು ಸರಿಯಾಗಿ ಪಾಲಿಸಬೇಕು.ಅಹಂಕಾರಿಯಾಗದೆ ಸಹ ಕಾರ್ಯಕರ್ತರ ಜೊತೆ ಉತ್ತಮ ಬಾಂಧವ್ಯ ಹೊಂದಿರಬೇಕು.

ಯಾರು ಹೊಗಳಿದರೂ, ತೆಗಳಿದರೂ ನಾವು ಅಲ್ಲಾಹನ ಸಂತೃಪ್ತಿಗಾಗಿ,ಪಾರತ್ರಿಕ ವಿಜಯಕ್ಕಾಗಿ ದುಡಿಯಬೇಕು ಎಂಬ ಹಿತ ವಚನ ನೀಡಿದರು.ನೂತನ ಅಧ್ಯಕ್ಷರಾಗಿ ಬಹುಮಾನ್ಯ ಅಬ್ದುರಹ್ಮಾನ್ ಸಖಾಫಿ ಪ್ರಧಾನ ಕಾರ್ಯದರ್ಶಿ ಜನಾಬ್ ಯಾಕೂಬ್ ಕಾರ್ಕಳ, ಕೋಶಾಧಿಕಾರಿ ಜನಾಬ್ ಮೂಸ ಇಬ್ರಾಹಿಮ್,ಸಂಘಟನಾ ವಿಭಾಗ ಚೇಯರ್ಮ್ಯಾನ್ ಜನಾಬ್ ಝಕ್ರಿಯಾ ಆನೆಕಲ್,ಕನ್ವೀನರ್ ಜನಾಬ್ ತೌಫೀಕ್ ಅಡ್ಡೂರ್,ಶಿಕ್ಷಣ ವಿಭಾಗ ಚೇಯರ್ಮ್ಯಾನ್ ಬಹುಮಾನ್ಯ ಉಮರುಲ್ ಪಾರೂಕ್ ಸಖಾಫಿ, ಕನ್ವೀನರ್ ಬಹುಮಾನ್ಯ ಬಾದುಷ ಸಖಾಫಿ, ಸಾಂತ್ವಾನ ವಿಭಾಗ ಚೇಯರ್ಮ್ಯಾನ್ ಜನಾಬ್ ಅಬ್ದುಲ್ ಲತೀಫ್ ಬಂಟ್ವಾಳ, ಕನ್ವೀನರ್ ಜನಾಬ್ ಇಕ್ಬಾಲ್ ಕಂದಾವರ, ಉಮ್ರಾ ಕನ್ವೀನರ್ ಬಹುಮಾನ್ಯ ಹುಸೈನ್ ಎರ್ಮಾಡ್, ಆಡಳಿತ ವಿಭಾಗ ಚೆಯರ್ಮ್ಯಾನ್ ಜನಾಬ್ ಮಾಲಿಕ್ ಸೂರಿಂಜೆ,ಕನ್ವೀನರ್ ಜನಾಬ್ ಉಸ್ಮಾನ್ ಕೋಡಿ,ಪಬ್ಲಿಕ್ ರಿಲೇಷನ್ ವಿಭಾಗ ಚೆಯರ್ಮ್ಯಾನ್ ಜನಾಬ್ ಇಬ್ರಾಹಿಮ್ ವೇಣೂರ್,ಕನ್ವೀನರ್ ಜನಾಬ್ ಮುಸ್ತಫಾ ಉಳ್ಳಾಲ,ಕಾರ್ಯಕಾರಿಣಿ ಸದಸ್ಯರುಗಳಾಗಿ ಬಹುಮಾನ್ಯ ಉಮರ್ ಝುಹ್ರಿ, ಜನಾಬ್ ಹಬೀಬ್ ಕೋಯ,ಜನಾಬ್ ಅಬ್ಬಾಸ್ ಬಳಂಜೆ,ಜನಾಬ್ ಅಹಮದ್ ಬಾವಕ,ಜನಾಬ್ ತೌಫೀಕ್ ಕಾರ್ಕಳ, ಜನಾಬ್ ಶೌಕತ್ ಶಿರ್ವ,ಜನಾಬ್ ಅಝೀಝ್ ತಿಂಗಳಾಡಿ,ಜನಾಬ್ ಸೆಮೀರ್ ಕೆ.ಸಿ.ರೋಡ್,ಜನಾಬ್ ಅಶ್ರಫ್ ಕಾರ್ಗಳ್,ಜನಾಬ್ ಸಲಾಂ ಮಣಿಪುರ ಹಾಗೂ ಎರಡು ಝೋನ್ ಸಮಿತಿಯನ್ನು ಘೋಸಿಸಲಾಯಿತು.

ಜಾಹೀರಾತು

ಕೆಸಿಎಫ್ ಕುವೈತ್ ಸೌತ್ ಝೋನ್ ಚೆಯರ್ಮ್ಯಾನ್ ಬಹುಮಾನ್ಯ ಶಾಹುಲ್ ಹಮೀದ್ ಝುಹ್ರಿ ಸಅದಿ,ಕನ್ವೀನರ್ ಜನಾಬ್ ಹಸೈನಾರ್ ಮೊಂಟೆಪದವು,ಸದಸ್ಯರು ಜನಾಬ್ ಅನ್ವರ್ ಬಜ್ಪೆ, ಜನಾಬ್ ಆದಂ ಅಬ್ದುರಹ್ಮಾನ್,ಕೆಸಿಎಫ್ ಕುವೈತ್ ನೊರ್ತ್ ಝೋನ್,ಚೆಯರ್ಮ್ಯಾನ್ ಜನಾಬ್ ವಹೀಬ್ ಕೆ.ಸಿ.ರೋಡ್,ಕನ್ವೀನರ್ ಜನಾಬ್ ತಮೀಮ್ ಮಲಾರ್,ಸದಸ್ಯರು ಜನಾಬ್ ಮೊಹ್ಸಿನ್ ಉಳ್ಳಾಲ, ಜನಾಬ್ ಹಾರಿಸ್,ಜನಾಬ್ ನಝೀರ್ ಜಹರಾ,ಜನಾಬ್ ಶೇಕ್ ನೌಶದ್ ರವರನ್ನು ಆಯ್ಕೆ ಮಾಡಲಾಯಿತು.

ಕೊನೆಯಲ್ಲಿ ಸೈಯದ್ ರವರ ಭಕ್ತಿ ನಿರ್ಭಯ ದುವಾದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

Exit mobile version