ಬಾಲಿವುಡ್‍ನ ನಂಬರ್ ಒನ್ ಐಟಂ ಗರ್ಲ್ ಸನ್ನಿಲಿಯೋನ್ ಪ್ರತಿ ದಿನ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ಆದೆಷ್ಟೋ ಯುವಕರ ನಿದ್ದೆ ಕದ್ದ ಈ ಮಾದಕ ಬೆಡಗಿಯ ಮೇಲೆ ಕೇಸು ದಾಖಲಾಗಿರುವ ಬಗ್ಗೆ ವರದಿಯಾಗಿದೆ.
ಏಕ್ ಪೆಹೇಲಿ ಲೀಲಾ ಚಿತ್ರದಲ್ಲಿ ನಾಯಕಿ ನಟಿಯಾಗಿ ಅಭಿನಯಿಸುತ್ತಿರುವ ಸನ್ನಿ ವಿರುದ್ಧ ಎಪ್‍ಐಆರ್ ದಾಖಲಾಗಲು ಕಾರಣ ಈ ಚಿತ್ರದ ಪ್ರಮೋಶನ್‍ಗಾಗಿ ಆಕೆ ಪೈವ್ ಸ್ಟಾರ್ ಹೋಟೆಲ್‍ಗೆ ಬಂದಿರುವುದು.
ಸನ್ನಿ ಅಭಿನಯದ ಈ ಚಿತ್ರ ಬಿಡುಗಡೆಯ ಹಂತದಲ್ಲಿರುವುದರಿಂದ ಚಿತ್ರದ ಪ್ರಮೋಶನ್‍ನನ್ನು ಪೈವ್ ಸ್ಟಾರ್ ಹೋಟೆಲ್‍ನಲ್ಲಿ ಆಯೋಜಿಸಲಾಗಿತ್ತು. ಆದರೆ ಕೊನೆಯ ಹಂತದಲ್ಲಿ ಬೇರೆಡೆ ಸ್ಥಳಾಂತರಿಸಲಾಯಿತು.
ಆದರೆ ಸನ್ನಿ ಬೇರೆ ಉದ್ದೇಶಕ್ಕಾಗಿ ಬಂದಿದ್ದಾಳೆಂದು ಎಂದು ತಿಳಿದು ಅಲ್ಲಿನ ಸಾರ್ವಜನಿಕರು ಆಕೆಯ ವಿರುದ್ಧ ಕೇಸು ದಾಖಲಿಸಿದ್ದಾರೆ.
ಸನ್ನಿಲಿಯೋನ್ ತಂಡದವರು ಸಿನಿಮಾ ಪ್ರಮೋಷನ್‍ಗೆ ಬಂದಿದ್ದಾಗಿ ಖಚಿತಪಡಿಸಿದ ಮೇಲೆ ಸಾರ್ಮಜನಿಕರು ಕೇಸು ವಾಪಸ್ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.