Site icon Ullalavani

ಪಿ.ಸಿ.ಝಹೀರ್ ಸ್ಮರಣಾರ್ಥ 13ನೆಯ ವರುಷದ ಅಂತರ ಕಾಲೇಜು ಫುಟ್ಬಾಲ್ ಪಂದ್ಯಾಟ ಉದ್ಘಾಟನೆ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು: ದೇರಳಕಟ್ಟೆಯ ಯೆನೆಪೋಯ ವಿಶ್ವವಿದ್ಯಾಲಯದಲ್ಲಿ ಪಿ.ಸಿ.ಝಹೀರ್ ಸ್ಮರಣಾರ್ಥ 13ನೆಯ ವರುಷದ ಅಂತರ್ ಕಾಲೇಜು ಫುಟ್ಬಾಲ್ ಪಂದ್ಯಾಟ ಯೆನೆಪೋಯ ವಿವಿಯ ಸಾಕರ್ ಕ್ರೀಡಾಂಗಣದಲ್ಲಿ ಬುಧವಾರ ಉದ್ಘಾಟನೆಗೊಂಡಿತು.

ಯೆನೆಪೋಯ ವಿವಿಯ ಶೈಕ್ಷಣಿಕ ಹಾಗೂ ಆಡಳಿತ ನಿರ್ದೇಶಕ ಪ್ರೊ.ಪಿ.ಸಿಂ.ಕುಂಞ ಪಂದ್ಯಾವಳಿ ಉದ್ಘಾಟಿಸಿದರು.

ಅಂತರಾಷ್ಟಿ ಯ ಫುಟ್ಬಾಲ್ ಆಟಗಾರ, ಭಾರತ ಫುಟ್ಬಾಲ್ ತಂಡದ ಮಾಜಿ ಕಪ್ತಾನ ಐ.ಎಂ.ವಿಜಯನ್ ಕಾಲ್ಚೆಂಡು ಒದೆಯುವ ಮೂಲಕ ಪಂದ್ಯಕ್ಕೆ ಚಾಲನೆ ನೀಡಿದರು.

ಯೆನೆಪೋಯ ವಿವಿ ಉಪ ಕುಲಪತಿ ಡಾ. ಪಿ.ಚಂದ್ರಮೋಹನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿವಿ ಕುಲಸಚಿವ ಡಾ. ಸಿ.ವಿ.ರಘುವೀರ್, ಪರೀಕ್ಷಾಂಗ ಕುಲಸಚಿವ ಪ್ರೊ. ಕೆ.ಪಿ.ಜಯರಾಜನ್, ಹಣಹಾಸು ಅಧಿಕಾರಿ ಅಹ್ಮದ್ ಬಾವ, ಅಲೈಡ್ ಹೆಲ್ತ್ ಆಂಡ್ ಬೇಸಿಕ್ ಸೈನ್ಸ್‌ನ ಡೀನ್ ಪ್ರೊ. ಪದ್ಮಕುಮಾರ್, ವೈಆರ್‌ಸಿ ಡೆಪ್ಯುಟಿ ಡೈರೆಕ್ಟರ್ ಡಾ. ಅರುಣ್ ಭಾಗವತ್ ಉಪಸ್ಥಿತರಿದ್ದರು.

ಯೆನೆಪೋಯ ವಿವಿ ಜಂಟಿ ಕ್ರೀಡಾ ನಿರ್ದೇಶಕ ಅನುಪ್ ಜೈನ್ ಎಂ.ಜೆ ಸ್ವಾಗತಿಸಿದರು. ಸಹ ಕ್ರೀಡಾ ನಿರ್ದೇಶಕಿ ಶಿಲ್ಪಶ್ರೀ ವಂದಿಸಿದರು.
ಮೊದಲ ಪಂದ್ಯ ಯೆನೆಪೋಯ ವಿವಿ ಹಾಗೂ ಸುರತ್ಕಲ್‌ನ ಎನ್‌ಐಟಿಕೆ ನಡುವೆ ನಡೆಯಿತು. ಯೆನೆಪೋಯ ವಿವಿ ೩-೦ರಲ್ಲಿ ಜಯಗಳಿಸಿತು. ಯೆನೆಪೋಯ ವಿವಿಯ ನಝೀಲ್ ೧ಹಾಗೂ ಅಕ್ಷಯ್ ೨ಗೋಲು ಬಾರಿಸಿದರು.

Exit mobile version