Site icon Ullalavani

ಶಿವಣ್ಣ ಜೊತೆ ಕನ್ನಡ ಚಿತ್ರವೊಂದರಲ್ಲಿ ನಟಿಸಲು ಐಶ್ವರ್ಯ ರೈ ಸೈ

ಮಾಜಿ ವಿಶ್ವ ಸುಂದರ, ಬಿಗ್ ಬಿ ಬಹು ಕನ್ನಡ ಚಿತ್ರವೊಂದರಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಒಂದು ವರ್ಷದಿಂದ ಐಶ್ವರ್ಯ ರೈ ಡೇಟ್ಸ್‍ಗಾಗಿ ಕಾದುಕುಳಿತಿದ್ದ ನಿರ್ದೇಶಕರಿಗೆ ಐಶ್ವರ್ಯ ರೈ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಇನ್ನು ಕರಾವಳಿ ಚೆಲುವೆ ಐಶು ಹಾಗೂ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ `ಮನಮೋಹಕ’ ಎಂಬ ಚಿತ್ರಕ್ಕೆ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ.
ಚಿತ್ರದ ನಿರ್ದೇಶಕ ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಚಿತ್ರದಲ್ಲಿ ಐಶು ಮನಮೋಹಕವಾಗಿ ಅಭಿನಯಿಸಲಿದ್ದಾರೆ.

ಶಿವ ರಾಜ್ ಕುಮಾರ್ ಅಭಿನಯದ `ಕಬೀರ್’ಚಿತ್ರದಲ್ಲಿ ಬಾಲಿವುಡ್‍ನ ಬಿಗ್ ಬಿ ಅಮಿತಾಬ್ ಬಚ್ಚನ್ನು ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ ಅನ್ನೋದು ಸದ್ಯಕ್ಕೆ ಗಾಂಧಿನಗರದಲ್ಲಿ ಹರಿಡಾಡುತ್ತಿರುವ ಸುದ್ದಿ.

ಐಶು ಕನ್ನಡ ಚಿತ್ರವೊಂದರಲ್ಲಿ ಶಿವರಾಜ್ ಕುಮಾರ್ ಜೊತೆಯಲ್ಲಿ ಐಶು ನಟಿಸುತ್ತಿದ್ದಾರೆ ಅನ್ನೋ ಸುದ್ದಿ ಅವರ ಅಭಿಮಾನಿಗಳಲ್ಲಿ ಸಂತೋಷದ ಜೊತೆಗೆ ಚಿತ್ರ ಯಾವಾಗ ಬಿಡುಗಡೆಗೊಳ್ಳುತ್ತದೆ ಅನ್ನೋ ಕಾತರವೇ ಹೆಚ್ಚಾಗುತ್ತಿದೆ ಅನ್ನೋ ಮಾತು ಕೇಳಿಬರುತ್ತಿದೆ.

ಐಶು ಹಾಗೂ ಶಿವಣ್ಣ ಜೋಡಿಯ ಮನಮೋಹಕ ಚಿತ್ರ ಶತದಿನ ಆಚರಿಸಲಿ ಅನ್ನೋದು ಇವರ ಅಭಿಮಾನಿಗಳ ಆಶಯ.

Exit mobile version