Site icon Ullalavani

ಮಾ.20 ಸಂಜೆ ಉಳ್ಳಾಲಕ್ಕೆ ರಾಹುಲ್ ಗಾಂಧಿ

UN NETWORKS

ಉಳ್ಳಾಲ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಇಂದು( ಮಾ.20) ಸಂಜೆ 7.00ಕ್ಕೆ ಉಳ್ಳಾಲದ ಇತಿಹಾಸ ಪ್ರಸಿದ್ಧ ಸೈಯ್ಯದ್ ಮದನಿ ದರ್ಗಾ ಭೇಟಿ ನೀಡಲಿದ್ದು, ನಡುವೆ ಅಬ್ಬಕ್ಕ ಪ್ರತಿಮೆಗೆ ಹೂಹಾರ ಹಾಕಿ ತೊಕ್ಕೊಟ್ಟು ಕಲ್ಲಾಪು ವಿನಿಂದ ರೋಡ್ ಷೋ ನಲ್ಲಿ ಭಾಗವಹಿಸಲಿದ್ದಾರೆ.

ಕಲ್ಲಾಪು, ತೊಕ್ಕೊಟ್ಟು, ಉಳ್ಳಾಲ ಭಾಗದಲ್ಲಿ ಲೈಟಿಂಗ್, ಬಂಟಿಂಗ್ಸ್ ಗಳ ಮೂಲಕ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು ಕಾರ್ಯಕರ್ತರು ಮುಂದಾಗಿದ್ದಾರೆ. ಕಲ್ಲಾಪು ಕಣಚೂರು ಮಿಲ್ ಎದುರುಗಡೆಯಿಂದ ಸಹಸ್ರ ಕಾರ್ಯಕರ್ತರು ವಾಹನಗಳಲ್ಲಿ , ರಾಹುಲ್ ಗಾಂಧಿಯವರ ಸಾಥ್ ನೀಡಲಿದ್ದಾರೆ. ವಾಹನದೊಳಕ್ಕೆ ನಿಂತು ರೋಡ್ ಷೋ ನಲ್ಲಿ ಉಳ್ಳಾಲ ಅಬ್ಬಕ್ಕ ವೃತ್ತದವರೆಗೆ ತೆರಳಿ ಅಲ್ಲಿ ವೀರರಾಣಿ ಅಬ್ಬಕ್ಕ ದೇವಿಯ ಪ್ರತಿಮೆಗೆ ಹೂಹಾರ ಹಾಕಿ ಗೌರವಿಸಲಿದ್ದಾರೆ.

              ಜಾಹೀರಾತು

ಅಲ್ಲಿಂದ ಉಳ್ಳಾಲ ಸೈಯ್ಯದ್ ಮದನಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸಲಿದ್ದಾರೆ. ದರ್ಗಾ ವಠಾರದಲ್ಲಿ ಸಜ್ಜುಗೊಳಿಸಲಾಗಿರುವ ವೇದಿಕೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

Exit mobile version