Site icon Ullalavani

ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ವತಿಯಿಂದ ದೇರಳಕಟ್ಟೆ ಶಾಲೆಗೆ ಪೀಠೋಪಕರಣ ಹಸ್ತಾಂತರ

UN NETWORKS

ಉಳ್ಳಾಲ: ದೇರಳಕಟ್ಟೆಯ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಸಂಸ್ಥೆ ಕಳೆದ 35 ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾ ಬಂದಿದ್ದು, 75 ವರ್ಷಗಳ ಇತಿಹಾಸವಿರುವ ದೇರಳಕಟ್ಟೆ ಸರಕಾರಿ ಶಾಲೆಯ ಅಭಿವೃದ್ಧಿಗೆ ಇದೀಗ ಕೊಡುಗೆಯನ್ನು ನೀಡುವ ಮೂಲಕ ಶೈಕ್ಷಣಿಕ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುತ್ತಿದೆ ಎಂದು ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ನ ಉಪಾಧ್ಯಕ್ಷ ಸಿದ್ದೀಖ್ ಡಿ.ಎಂ ಹೇಳಿದ್ದಾರೆ.

ಅವರು ದೇರಳಕಟ್ಟೆಯ ಬದ್ರಿಯಾ ಜುಮಾ ಮಸೀದಿಯ ಅಂಗ ಸಂಸ್ಥೆಯಾದ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಇವರು ದೇರಳಕಟ್ಟೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಗೆ ಪೀಠೋಪಕರಣಗಳನ್ನು ಹಸ್ತಾಂತರಿಸುವ ಸಂದರ್ಭ ಮಾತನಾಡಿದರು.

ಸಂಸ್ಥೆ ಸಮಾಜದಲ್ಲಿ ಹಿಂದುಳಿದ ವರ್ಗ, ಪ್ರತಿ ಧರ್ಮದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸಹಕಾರ ನೀಡುತ್ತಾ ಬಂದಿದೆ. 75 ವರ್ಷ ಇತಿಹಾಸವಿರುವ ಸರಕಾರಿ ಶಾಲೆ ಅಭಿವೃದ್ಧಿಯಲ್ಲಿ ಹಿಂದಿದೆ. ಮುಂದಿನ ಸಾಲಿನಲ್ಲಿ ಹಳೇ ವಿದ್ಯಾರ್ಥಿ ಸಂಘ 75ನೇ ವರ್ಷಾಚಣೆಯನ್ನು ಆಚರಿಸಲು ಮುಂದಾಗಿದ್ದು, ಈ ಮೂಲಕ ಹಲವು ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದೆ. ಅದರಂತೆ ಸಂಸ್ಥೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಬೆಂಚ್ ಡೆಸ್ಕುಗಳನ್ನು ನೀಡಿದೆ ಎಂದರು.

ಹಳೇ ವಿದ್ಯಾರ್ಥಿ ಸಂಘದ ಸಿದ್ದೀಖ್ ಅಹಮ್ಮದ್ ಮಾತನಾಡಿ ಕನ್ನಡ ಶಾಲೆ ಅವನತಿ ಸಂದರ್ಭ ಪ್ರೋತ್ಸಾಹಿಸುವ ಕೆಲಸ ಹಳೇ ವಿದ್ಯಾರ್ಥಿ ಸಂಘದಿಂದ ಆಗುತ್ತಿದೆ. 75ರ ವರ್ಷಾಚರಣೆ ಹಿನ್ನೆಲೆಯಲ್ಲಿ ಶಾಲೆಯಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ. ಅದರಂತೆ ಮಸೀದಿ ಅಂಗ ಸಂಸ್ಥೆಯವರು ಸ್ಪಂಧಿಸಿರುವ ಕಾರ್ಯ ಅಭಿನಂದನೀಯ ಎಂದರು.

ಈ ಸಂದರ್ಭ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷ ಇಲ್ಯಾಸ್.ಜೆ ಕಾರ್ಯದರ್ಶಿ ಅಮೀರ್, ಮುತಲೀಬ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗದೀಶ್ ರೈ, ಕಾರ್ಯದರ್ಶಿ ಸುರೇಶ ಆಚಾರ್ , ಅಶೋಕ್ ರೈ ಬರಿಕೆ, ಸಿದ್ದೀಖ್ ಅಹಮ್ಮದ್, ಚಿದಾನಂದ, ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಸಿವಿಯಾ. ಬಿ.ಮಿನೇಜಸ್, ಸಹಶಿಕ್ಷಕರಾದ ಚಂದ್ರಕಲಾ , ಗಣೇಶ್ ರಾವ್, ಮೇಬಲ್, ಸುಹಾನಿ, ಮಮತಾ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ರಾಜೇಶ್ವರಿ ಉಪಸ್ಥಿತರಿದ್ದರು.

Exit mobile version